Saturday, June 13, 2026
Homeಕರಾವಳಿಮಂಗಳೂರುಶಿರಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಲಾರಿಯಲ್ಲಿ ಬೆಂಕಿ

ಶಿರಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಲಾರಿಯಲ್ಲಿ ಬೆಂಕಿ

- Advertisement -
- Advertisement -

ಸಕಲೇಶಪುರ: ಚಲಿಸುತ್ತಿದ್ದ ಲಾರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಲಾರಿ ಬಹುತೇಕ ಸುಟ್ಟು ಹೋದ ಘಟನೆ ಶಿರಾಡಿ ಘಾಟ್ ನಲ್ಲಿ ನಡೆದಿದೆ.

ಶಿರಾಡಿ ಘಾಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಲಾರಿ ಚಲಿಸುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಚಾಲಕ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ.ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಲಾರಿಗೆ ಬೆಂಕಿ ಆವರಿಸಿಕೊಂಡಿದ್ದು, ಬಹುತೇಕ ಸುಟ್ಟು ಹೋಗಿದೆ.

ಈ ವೇಳೆ ಲಾರಿಗೆ ಬೆಂಕಿ ಹತ್ತಿಕೊಂಡಿದ್ದನ್ನು ಗಮನಿಸಿ ಇದೇ ರಸ್ತೆಯಲ್ಲಿ ಬರುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಸೈರನ್ ಹಾಕಿ ಉಳಿದ ವಾಹನ ಚಾಲಕರನ್ನು ಎಚ್ಚರಿಕೆಯಿಂದ ಚಲಿಸುವಂತೆ ಎಚ್ಚರಿಸಿದ್ದಾರೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಅಗ್ನಿ ಶಮನ ಮಾಡಿದ್ದಾರೆ.

- Advertisement -

Latest News

error: Content is protected !!