Friday, June 5, 2026
Homeಕರಾವಳಿಉಡುಪಿಕಾರ್ಕಳ; ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕಳವುಗೈದ ವಸ್ತು ಸಹಿತ ಬಂಧಿಸಿದ ಪೊಲೀಸರು

ಕಾರ್ಕಳ; ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕಳವುಗೈದ ವಸ್ತು ಸಹಿತ ಬಂಧಿಸಿದ ಪೊಲೀಸರು

- Advertisement -
- Advertisement -

ಕಾರ್ಕಳ; ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕಳವುಗೈದ ವಸ್ತು ಸಹಿತ ಪೊಲೀಸರು ಬಂಧಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ಮಾಳ ಗ್ರಾಮದ ಸಂತೋಷ್ ಟಿ.(32) ಬಂಧಿತ ಆರೋಪಿ.

ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆ ಎಂಬಲ್ಲಿ ಮೂರು ದಿನಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ.ಆತನಿಂದ ಕಳವು ಮಾಡಿದ 33 ಪವನ್ ತೂಕದ 10,05,000ರೂ. ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ.

ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ಮನೆಗೆ ಆ.30ರಂದು ನುಗ್ಗಿದ ಕಳ್ಳರು, ಸುಮಾರು 33 ಪವನ್ ತೂಕದ 10,05,000ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಎಸ್ಸೈಗಳಾದ ದಿಲೀಪ್ ಜಿ.ಆರ್. ಮತ್ತು ಸುಂದರ ಹಾಗೂ ಸಿಬ್ಬಂದಿ ಮಹಾಂತೇಶ್, ಪ್ರಶಾಂತ್ ಕೆ., ವಿಶ್ವನಾಥ, ಶಶಿಕುಮಾರ್, ನಾಗರಾಜ, ಗೋವಿಂದ ಆಚಾರಿ ರಾಘವೇಂದ್ರ, ಅಶೋಕ ಅವರನ್ನೊಳ ಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

- Advertisement -

Latest News

error: Content is protected !!