Saturday, June 13, 2026
Homeಕರಾವಳಿಬೆಳ್ತಂಗಡಿ : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ: ಆರೋಪಿಗಳ ಮನೆಯಿಂದ ಬೈಕ್, ಬಟ್ಟೆ...

ಬೆಳ್ತಂಗಡಿ : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ: ಆರೋಪಿಗಳ ಮನೆಯಿಂದ ಬೈಕ್, ಬಟ್ಟೆ ,ಕತ್ತಿ ವಶಕ್ಕೆ

- Advertisement -
- Advertisement -

ಬೆಳ್ತಂಗಡಿ : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಆ.26 ರಂದು ಐದು ದಿನ ಪೊಲೀಸ್  ಕಸ್ಟಡಿಗೆ ಪಡೆದ ಬಳಿಕ ಆ.28 ರಂದು ಮಧ್ಯಾಹ್ನ ಕಾಸರಗೋಡು ಮನೆಗೆ ತೆರಳಿದ ಧರ್ಮಸ್ಥಳ ಪೊಲೀಸರ ತಂಡ ಕೊಲೆಗೆ ಬಳಸಿದ ಬೈಕ್, ಕತ್ತಿ , ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ಅವರನ್ನು ಕೊಲೆ ಮಾಡಿದ ಆರೋಪಿಗಳಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕುಂಬ್ರಾಜೆ ಗ್ರಾಮದ ಒಡಬ್ಬಳ ನಿವಾಸಿಯಾಗಿರುವ  ಆಳಿಯ ರಾಘವೇಂದ್ರ ಕೆದಿ ಲಾಯ( 53) ಮತ್ತು ಮೊಮ್ಮಗ ಮುರಳಿಕೃಷ್ಣ (21) ಅವರನ್ನು ಸ್ಥಳ ಮಹಜರು ನಡೆಸಲು ಆ.28 ರಂದು ಆರೋಪಿಗಳ ಕಾಸರಗೋಡು ಮನೆಗೆ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣೀರ ಹಾಗೂ ಸಿಬ್ಬಂದಿ ತಂಡದವರು ಹೋಗಿದ್ದು ಈ ವೇಳೆ ಕೊಲೆಗೆ ಬಳಸಿದ ಹೀರೋ  ಕಂಪನಿಯ ಒಂದು ಬೈಕ್ , ಒಂದು ಕತ್ತಿ , ಇಬ್ಬರು ಆರೋಪಿಗಳ ಬಟ್ಟೆಯನ್ನು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!