Saturday, June 6, 2026
Homeತಾಜಾ ಸುದ್ದಿಮೈಸೂರಿನ ಕೇರ್ಗಳ್ಳಿ ಗ್ರಾಮದಲ್ಲಿದ್ದ ಕೊರಗಜ್ಜ ದೈವಸ್ಥಾನ ನೆಲಸಮ

ಮೈಸೂರಿನ ಕೇರ್ಗಳ್ಳಿ ಗ್ರಾಮದಲ್ಲಿದ್ದ ಕೊರಗಜ್ಜ ದೈವಸ್ಥಾನ ನೆಲಸಮ

- Advertisement -
- Advertisement -

ಮೈಸೂರು; ಮೈಸೂರಿನ ಕೇರ್ಗಳ್ಳಿ ಗ್ರಾಮದಲ್ಲಿದ್ದ ಕೊರಗಜ್ಜ ದೈವಸ್ಥಾನವನ್ನು ನೆಲಸಮ ಜಿಲ್ಲಾಡಳಿತ ನೆಲಸಮ ಮಾಡಿದೆ.ಮೈಸೂರು ತಾಲೂಕು ಕೇರ್ಗಳ್ಳಿ ಗ್ರಾಮದಲ್ಲಿ ಈ ದೇವಾಲಯವನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ದಾಖಲೆಗಳನ್ನ ಪರಿಶೀಲಿಸಿದ ಉಪವಿಭಾಗಾಧಿಕಾರಿ ಕೆ.ರಕ್ಷಿತ್  ಆದೇಶದಂತೆ ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ದೇವಾಲಯದ ಕಟ್ಟಡವನ್ನು ನೆಲಸಮ ಮಾಡಿದ್ದಾರೆ.

ಕೇರ್ಗಳ್ಳಿ ಗ್ರಾಮದ ಸ ನಂ. 60 ರಲ್ಲಿ  ರಾಜ ಕಾಲುವೆ ಹಾದು ಹೋಗಿದ್ದ ಜಾಗವನ್ನು ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಭಂಧ ದಾಖಲೆಗಳನ್ನ ಪರಿಶೀಲಿಸಿದ ಉಪವಿಭಾಗಾಧಿಕಾರಿ ಕೆ.ರಕ್ಷಿತ್ ಒತ್ತುವರಿ ಆಗಿದ್ದನ್ನು ಖಚಿತಪಡಿಸಿಕೊಂಡಿದ್ದರು.. ತಕ್ಷಣ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು..ಅದರಂತೆ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ರವರು ಜಯಪುರ ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಿ ಕೊರಗಜ್ಜ ದೆವಾಲಯವನ್ನು ತೆರವು ಮಾಡಿಸಿದರು.

ಈ ಬಗ್ಗೆ ಬೇರೆ ಬೇರೆ ಮಾತುಗಳು ಕೇಳಿ ಬರುತ್ತಿವೆ. ದುಡ್ಡು ಮಾಡುವ ಉದ್ದೇಶದಿಂದ ಇಲ್ಲಿ ಕೊರಗಜ್ಜನ ದೈವಸ್ಥಾನವನ್ನು ಕಟ್ಟಲಾಗಿತ್ತು. ಕೊರಗಜ್ಜನ ಹೆಸರಿನಲ್ಲಿ ಭಕ್ತರಿಗೆ ವಂಚಿಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಕೊರಗಜ್ಜನ ದೇವಸ್ಥಾನ ನೆಲಸಮ ಮಾಡಲಾಗಿದ್ದು, ಕರಾವಳಿಗೆ ಸೀಮಿತವಾಗಿದ್ದ ಕೊರಗಜ್ಜನನ್ನು ದುಡ್ಡಿಗಾಗಿ ಈ ರೀತಿ ಎಲ್ಲೆಲ್ಲೋ ಹೋಗಿ ದೈವಸ್ಥಾನ ನಿರ್ಮಿಸಿ ಆರಾಧನೆ ಮಾಡಿದ್ರೆ ಅಜ್ಜನೇ ಬುದ್ಧಿ ಕಲಿಸ್ತಾನೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ ಎಂದು ಭಕ್ತರು ಹೇಳುತ್ತಿದ್ದಾರೆ.

- Advertisement -

Latest News

error: Content is protected !!