Monday, June 8, 2026
Homeಕರಾವಳಿಚಿಕ್ಕಮಗಳೂರು; ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿ

ಚಿಕ್ಕಮಗಳೂರು; ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿ

- Advertisement -
- Advertisement -

ಚಿಕ್ಕಮಗಳೂರು;ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ನಡೆದಿದೆ. ಸುಭಿಕ್ಷಾ (25)  ಮೃತ ದುರ್ದೈವಿ.

 ಮಲವಂತಿಗೆ ಗ್ರಾಮದ ಚೆನ್ನೆಗೌಡರ ಮಗಳಾಗಿರುವ ಸುಭಿಕ್ಷಾ ಅವರನ್ನು ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ  ಎರಡೂವರೆ ವರ್ಷದ ಒಂದು ಗುಂಡು ಮಗುವಿದೆ. ನಿನ್ನೆ ಸಂಜೆ 4 ಗಂಟೆಗೆ ಸುಭಿಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮಗಳಿಗೆ ವರದಕ್ಷಿಣೆ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸುಭೀಕ್ಷಾ ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮೇಲೆ ಎಫ್.ಐ.ಆರ್  ದಾಖಲಾಗಿದೆ. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!