Saturday, June 13, 2026
Homeಕರಾವಳಿಐವಾನ್ ಡಿಸೋಜಾಗೆ ಪಾಕ್ ಉಗ್ರರ ನಂಟು ಇದ್ಯಾ ಎಂಬ ಸಂಶಯ ಬರುತ್ತದೆ; ಸಂಸದ ಗೋವಿಂದ ಕಾರಜೋಳ...

ಐವಾನ್ ಡಿಸೋಜಾಗೆ ಪಾಕ್ ಉಗ್ರರ ನಂಟು ಇದ್ಯಾ ಎಂಬ ಸಂಶಯ ಬರುತ್ತದೆ; ಸಂಸದ ಗೋವಿಂದ ಕಾರಜೋಳ ಹೇಳಿಕೆ

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲರ ವಿರುದ್ಧ ಮಂಗಳೂರಿನಲ್ಲಿ ನಿನ್ನೆ ಪ್ರತಿಭಟನೆ ವೇಳೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನೀಡಿದ್ದ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ಮುಂದುವರಿದಿದೆ.

ಐವನ್ ಡಿಸೋಜಾಗೆ ಪಾಕಿಸ್ತಾನದ ಉಗ್ರರ ನಂಟು ಇದೆಯಾ ಎನ್ನುವ ಸಂಶಯ ಬರುತ್ತದೆ ಎಂದು ಹೇಳಿರುವ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಐವಾನ್ ಡಿಸೋಜಾಗೆ ದೇಶದ್ರೋಹಿ ಎನ್ನುವ ಪಟ್ಟ ಕಟ್ಟಬೇಕು ಮತ್ತು
ಎಂಎಲ್ ಸಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ಐವಾನ್ ಡಿಸೋಜಾ ಅವರನ್ನು ನಿನ್ನೆಯೇ ಬಂಧಿಸಬೇಕಿತ್ತು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ರಾಜ್ಯಪಾಲರನ್ನು ನಿಂದಿಸಿದರೆ 7 ವರ್ಷಗಳ ಕಾಲ ಜೈಲಾಗುತ್ತದೆ, ಐವಾನ್ ಡಿಸೋಜಾ ಹೇಳಿಕೆ ಬಹಳ ಗಂಭೀರವಾಗಿದೆ, ರಾಜಭವನಕ್ಕೆ ನುಗ್ಗುತ್ತೇವೆ ಎಂದು ಪ್ರಚೋದನೆ ಕೊಟ್ಟಿದ್ದಕ್ಕೆ ಗೂಂಡಾ ಕಾಯ್ದೆ ಅಡಿ ಕ್ರಮ‌ ಆಗಬೇಕಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ನಿನ್ನೆ ನಡೆದ ಪ್ರತಿಭಟನೆ ವೇಳೆ ಬಾಂಗ್ಲಾದೇಶದಲ್ಲಿ ಆದ ಪರಿಸ್ಥಿತಿಯೇ ಇಲ್ಲೂ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿಕೆ ನೀಡಿದ್ದರು.

- Advertisement -

Latest News

error: Content is protected !!