Friday, June 5, 2026
Homeಕರಾವಳಿಕಡಬ; ಕರ್ತವ್ಯದಲ್ಲಿದ್ದಾಗಲೇ ಕುಳಿತ ಸ್ಥಿತಿಯಲ್ಲಿ ವ್ಯಕ್ತಿ ಸಾವು

ಕಡಬ; ಕರ್ತವ್ಯದಲ್ಲಿದ್ದಾಗಲೇ ಕುಳಿತ ಸ್ಥಿತಿಯಲ್ಲಿ ವ್ಯಕ್ತಿ ಸಾವು

- Advertisement -
- Advertisement -

ಕಡಬ; ಕರ್ತವ್ಯದಲ್ಲಿದ್ದಾಗಲೇ ಕುಳಿತ ಸ್ಥಿತಿಯಲ್ಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಕಚೇರಿಯಲ್ಲಿ ನಡೆದಿದೆ.

ಇಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕೊಯಿಲ ಗ್ರಾಮದ ಕೆರೆಕೋಡಿ ನಿವಾಸಿ  ವರದರಾಜ ಶೆಟ್ಟಿ (45)  ಮೃತ ದುರ್ದೈವಿ. ವರದರಾಜ ಶೆಟ್ಟಿ  ಅವರು ಆಗಸ್ಟ್ 17ರಂದು ರಾತ್ರಿ 8 ಗಂಟೆಗೆ ಡ್ಯೂಟಿಗೆ ಹಾಜರಾಗಿದ್ದರು. ಮರುದಿನ ಬೆಳಿಗ್ಗೆ   6 ಗಂಟೆಯ ತನಕ ಡ್ಯೂಟಿ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ಸ್ಥಳೀಯರು ಬಂದು ನೋಡಿದಾಗ ಅವರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಅವರು ಸಾವನ್ನಪ್ಪಿರೋದು ಗೊತ್ತಾಗಿದೆ.

ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಕಡಬ ಸರಕಾರಿ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅರು ಸಾವನ್ನಪ್ಪಿರೋದು ಖಾತ್ರಿ ಪಡಿಸಿದ್ದಾರೆ. ಹೃದಯಾಘಾತದಿಂದ ಅವಕರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಅ ಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಮನೋಹರ ಪ್ರಕಾಶ್ ಡಿ. ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!