Tuesday, June 9, 2026
Homeಕರಾವಳಿಉಡುಪಿಕುಂದಾಪುರ: ದೇವರಿಗೆ ಕೈ ಮುಗಿದು ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳ

ಕುಂದಾಪುರ: ದೇವರಿಗೆ ಕೈ ಮುಗಿದು ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳ

- Advertisement -
- Advertisement -

ಕುಂದಾಪುರ: ಕಳ್ಳನೊಬ್ಬ ದೇವರಿಗೆ ಕೈ ಮುಗಿದು ಅದೇ ದೇವಸ್ಥಾನಕ್ಕೆ ಕನ್ನ ಹಾಕಿದ ಘಟನೆ  ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆದಿದೆ. ಘಟನೆ ಇಂದು( ಶನಿವಾರ) ಬೆಳಗ್ಗೆ  ಬೆಳಕಿಗೆ ಬಂದಿದೆ.

ಕೆಲ ತಿಂಗಳ ಹಿಂದಷ್ಟೇ 7 ಕೋಟಿ ವೆಚ್ಚದಲ್ಲಿ ಈ ದೇಗುಲವನ್ನು ಜೀರ್ಣೋದ್ದಾರ ಮಾಡಲಾಗಿತ್ತು.  ದೇವಸ್ಥಾನದಲ್ಲಿ ಅಂದಾಜು ಸುಮಾರು 40 ಸಾವಿರಕ್ಕೂ ಅಧಿಕ ನಗದು ಕಳ್ಳತನ ಎನ್ನಲಾಗಿದೆ.

 ಬಾಗಿಲಿನ ಚಿಲಕದ ಸ್ಕ್ರೂ ತೆಗೆದು ಒಳಗೆ ಪ್ರವೇಶಿಸಿದ ಕಳ್ಳ, ತಿಂಗಳ ಸತ್ಯನಾರಾಯಣ ಪೂಜೆಗಾಗಿ ಸಂಗ್ರಹಿಸಿದ ಹಣವನ್ನು ಎಗರಿಸಿದ್ದಾನೆ.

ಚಪ್ಪಲಿ ಹಾಕಿಕೊಂಡೆ‌ ಕೈ ಮುಗಿದು ಬಳಿಕ ಕಳ್ಳತನ ಕೃತ್ಯ ನಡೆಸಿದ್ದು, ಕಾಣಿಕೆ ಡಬ್ಬಿ ಒಡೆದು ಹಣ ಎಗರಿಸಿದ ಕಳ್ಳನ‌ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!