Wednesday, June 24, 2026
Homeಅಪರಾಧವೀಸಾ ನೀಡುವ ಭರವಸೆ ನೀಡಿ ಲಕ್ಷಾಂತರ ರೂ ವಂಚನೆ

ವೀಸಾ ನೀಡುವ ಭರವಸೆ ನೀಡಿ ಲಕ್ಷಾಂತರ ರೂ ವಂಚನೆ

- Advertisement -
- Advertisement -

ಕೊಲ್ಲೂರು: ವ್ಯಕ್ತಿಯೋರ್ವರಿಗೆ ವಿದೇಶಕ್ಕೆ ತೆರಳಲು ವೀಸಾ ಒದಗಿಸುವುದಾಗಿ ಭರವಸೆ ನೀಡಿ 15 ಲಕ್ಷದ 50 ಸಾವಿರ ರೂ. ನಗದು ಪಡೆದು ವಂಚಿಸಿದ ಘಟನೆ ನಡೆದಿದೆ.

ವಿದೇಶಕ್ಕೆ ತೆರಳಲು ಕೊಲ್ಲೂರಿನ ಜಡ್ಕಲ್‌ ನಿವಾಸಿ ರಾಜನ್‌ ಅವರ ಪುತ್ರ ಶಿಜೋ ಅವರಿಗೆ ವೀಸಾ ಒದಗಿಸುವುದಾಗಿ ಭರವಸೆ ನೀಡಿ 15 ಲಕ್ಷದ 50 ಸಾವಿರ ರೂ. ನಗದು ಪಡೆದು ವೀಸಾ ನೀಡದೆ ಬಾಕಿ ಕೊಡಬೇಕಾದ 8 ಲಕ್ಷದ 95 ಸಾವಿರ ರೂ. ನಗದು ವಾಪಸ್‌ ನೀಡದೇ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿ ಗೌತಮ್‌ ವಿರುದ್ಧ ಕೊಲ್ಲೂರು ಠಾಣೆಗೆ ದೂರು ನೀಡಲಾಗಿದೆ.

ಕುಮಟಾದಲ್ಲಿರುವ ಆರೋಪಿ ತಂದೆ ಸುರೇಶ್‌ ಅವರನ್ನು ಸಂಪರ್ಕ ಮಾಡಿದಾಗ ತನ್ನ ಮಗ ಹಲವರಿಗೆ ವೀಸಾ ಒದಗಿಸಿದ್ದಾನೆ ಎಂಬ ಭರವಸೆ ನೀಡಿದ ಮೇಲೆ 11 ಲಕ್ಷದ 75 ಸಾವಿರ ರೂ.ಗಳನ್ನು ಬ್ಯಾಂಕ್‌ ಮೂಲಕ ಪಾವತಿ ಮಾಡಲಾಗಿತ್ತು. ಹಣ ಪಾವತಿ ಅನಂತರ ವೀಸಾ ನೀಡದೇ ಕೇವಲ 3 ಲಕ್ಷದ 75 ಸಾವಿರ ರೂ. ಮರುಪಾವತಿ ಮಾಡಿ ಬಾಕಿ ಹಣ ನೀಡದೇ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನು ಈ ಘಟನೆಯ ಕುರಿತಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!