Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡು: ಧ್ವಜರೋಹಣದ ವೇಳೆ ವಿದ್ಯುತ್ ಶಾಕ್ ತಗುಲಿ ಚರ್ಚ್ ಫಾದರ್ ಸಾವು, ಮತ್ತೋರ್ವ ಗಂಭೀರ

ಕಾಸರಗೋಡು: ಧ್ವಜರೋಹಣದ ವೇಳೆ ವಿದ್ಯುತ್ ಶಾಕ್ ತಗುಲಿ ಚರ್ಚ್ ಫಾದರ್ ಸಾವು, ಮತ್ತೋರ್ವ ಗಂಭೀರ

- Advertisement -
- Advertisement -

ಕಾಸರಗೋಡು:ಧ್ವಜರೋಹಣ ವೇಳೆ ವಿದ್ಯುತ್ ಶಾಕ್ ತಗುಲಿ ಚರ್ಚ್ ಫಾದರ್ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ   ಕಾಸರಗೋಡಿನ ಮುಳ್ಳೇರಿಯದಲ್ಲಿ ನಡೆದಿದೆ.

 ಮುಳ್ಳೇರಿಯಾ ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗುರು ಫಾ. ಮ್ಯಾಥ್ಯೂ ಶಿನ್ಸ್ ಕುಡಿಲಿಲ್ ( 30) ಮೃತ ಫಾದರ್. ಅವರ  ಜೊತೆಗಿದ್ದ ಧರ್ಮಗುರು ಫಾ. ಸೆಬಿನ್ ಜೋಸೆಫ್ ( 29) ಗಾಯಗೊಂಡಿದ್ದಾರೆ.

 ಫಾ. ಮ್ಯಾಥ್ಯೂ ಶಿನ್ಸ್ ಕುಡಿಲಿಲ್  ಮೂಲತಃ ಕಣ್ಣೂರು ಇರಿಟ್ಟಿ ನಿವಾಸಿ. ದೇಲಂಪಾಡಿ ಸಂತ ಮೇರಿಸ್ ಚರ್ಚ್ ಧರ್ಮಗುರು ಆಗಿದ್ದ ಫಾ . ಮ್ಯಾಥ್ಯೂ , ಗುರುವಾರ ಸಂಜೆ ಮುಳ್ಳೇರಿಯಾ ಚರ್ಚ್ ನಲ್ಲಿ ರಾಷ್ಟ್ರ ಧ್ವಜ ಅವರೋಹಣ ನಡೆಸುತ್ತಿದ್ದಾಗ ಧ್ವಜ ಅಳವಡಿಸಿದ್ದ ಕಬ್ಬಿಣದ ಪೈಪ್ ಸಮೀಪದ ಹೈಟೆನ್ಷನ್ ಲೈನ್ ಗೆ ತಗಲಿದೆ. ವಿದ್ಯುತ್ ಶಾಕ್ ತಗಲಿ ನೆಲಕ್ಕೆ ಬಿದ್ದ ಇಬ್ಬರನ್ನೂ ಕೂಡಲೇ ಮುಳ್ಳೇರಿಯಾದ ಆಸ್ಪತ್ರೆಗೆ ತಲಪಿಸಿದರೂ ಫಾ. ಮ್ಯಾಥ್ಯೂ ಅದಾಗಲೇ ಮೃತಪಟ್ಟಿದ್ದರು.  ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!