Sunday, June 7, 2026
Homeಕರಾವಳಿಉಪ್ಪಿನಂಗಡಿಯಲ್ಲಿ ಮಾದಕ ವಸ್ತು ಸಾಗುತ್ತಿದ್ದ ಮೂವರ ಬಂಧನ

ಉಪ್ಪಿನಂಗಡಿಯಲ್ಲಿ ಮಾದಕ ವಸ್ತು ಸಾಗುತ್ತಿದ್ದ ಮೂವರ ಬಂಧನ

- Advertisement -
- Advertisement -

ಉಪ್ಪಿನಂಗಡಿ: ಆಟೋದಲ್ಲಿ ಮಾದಕ ವಸ್ತು ಸಾಗುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.  ಆರೋಪಿಗಳಾದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ನಿವಾಸಿ ಮೊಹಮ್ಮದ್ ನಾಸೀರ್(24),  ಬಂಟ್ವಾಳದ ಬುಡೋಳಿ ನಿವಾಸಿ ಮಹಮ್ಮದ್ ಆಸೀಫ್ (21), ಸಿನಾನ್ ಬಂಧಿತ ಆರೋಪಿಗಳು.

ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಹೆಚ್ ಮತ್ತು ಸಿಬ್ಬಂದಿ ದಿನಾಂಕ 09-08-2024 ರಂದು ಬೆಳಿಗ್ಗೆ, ಪುತ್ತೂರು ತಾಲೂಕು  ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು.  ಈ ವೇಳೆ ಇದೇ ಮಾರ್ಗವಾಗಿ ಬಂದ ಕೆಎ-21-ಸಿ-3003 ನೇ ನೋಂದಣಿ ಸಂಖ್ಯೆಯ ಅಟೋರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದ್ದಾರೆ. ಆಗ, ಆಟೋವನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿ, ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ವಾಹನದಲ್ಲಿದ್ದ ಚಾಲಕ ಮತ್ತು ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿಯು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದ್ದಾರೆ .ಆರೋಪಿಗಳನ್ನು  ಹಿಡಿದು ವಿಚಾರಿಸಲಾಗಿ ಸಮರ್ಪಕವಾದ ಉತ್ತರ ನೀಡಿಲ್ಲ. ಹಾಗಾಗಿ ವಾಹನದ ದಾಖಲಾತಿಗಳನ್ನು ಹಾಗೂ ವಾಹನವನ್ನು ತಪಾಸಣೆ ನಡೆಸಿದಾಗ, ಅಟೋರಿಕ್ಷಾದಲ್ಲಿ ಸುಮಾರು 18,720 ರೂ ಮೌಲ್ಯದ 9.36 ಗ್ರಾಂ ನಿಷೇದಿತ ಎಂ.ಡಿ.ಎಂ.ಎ ಮಾದಕ ವಸ್ತು ಮತ್ತು 15  ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್ಗಳು ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಗಳು, ಮಾದಕ ವಸ್ತು ಹಾಗೂ ಅಟೋರಿಕ್ಷಾವನ್ನು ಹಾಗೂ ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 94/2024  ಕಲಂ: U/s 8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ  ಮತ್ತು ಕಲಂ: 3(5) BNS 2023 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

- Advertisement -

Latest News

error: Content is protected !!