Monday, June 8, 2026
Homeತಾಜಾ ಸುದ್ದಿನಾಗರಪಂಚಮಿ ದಿನವೇ ಹಾವು ಕಚ್ಚಿ ವಿವಾಹಿತ ಯುವತಿ ಸಾವು

ನಾಗರಪಂಚಮಿ ದಿನವೇ ಹಾವು ಕಚ್ಚಿ ವಿವಾಹಿತ ಯುವತಿ ಸಾವು

- Advertisement -
- Advertisement -

ಶಿವಮೊಗ್ಗ; ನಾಗರಪಂಚಮಿ ದಿನವೇ ಹಾವು ಕಚ್ಚಿ ವಿವಾಹಿತ ಯುವತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ. ರಂಜಿತಾ (22)  ಮೃತ ಯುವತಿ.

ದನಕರುಗಳಿಗೆ ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವೊಂದು ಮಹಿಳೆಗೆ ಕಡಿದಿದೆ ಎನ್ನಲಾಗಿದೆ.ಕೆಲಹೊತ್ತಿನ ಬಳಿಕ ಹಾವು ಕಚ್ಚಿರುವುದು ಅವರಿಗೆ ಗೊತ್ತಾಗಿದೆ. ಮನೆಯವರು ನೋಡಿದಾಗ ರಂಜಿತಾ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿ ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತ ರಂಜಿತಾಗೆ ಮೂರು ವರ್ಷದ ಹೆಣ್ಣು ಹಾಗೂ 4 ತಿಂಗಳ ಗಂಡು ಮಗು ಇದೆ.

- Advertisement -

Latest News

error: Content is protected !!