Thursday, June 4, 2026
Homeಕರಾವಳಿಉಡುಪಿಇಂದು ಐದನೇ ದಿನದ ಮೈಸೂರು ಚಲೋ ಪಾದಯಾತ್ರೆ; ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಭಾಗಿ

ಇಂದು ಐದನೇ ದಿನದ ಮೈಸೂರು ಚಲೋ ಪಾದಯಾತ್ರೆ; ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಭಾಗಿ

- Advertisement -
- Advertisement -

ಮಂಡ್ಯ; ರಾಜ್ಯ ಸರ್ಕಾರ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಐದನೇ ದಿನವಾದ ಇಂದು ಮಂಡ್ಯದಿಂದ ಆರಂಭವಾಗಿದೆ. ಐದನೇ ದಿನದ ಪಾದಯಾತ್ರೆಯಲ್ಲಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಅಲ್ಲದೇ ಕರಾವಳಿಯ ಹುಲಿ ಕುಣಿತ ಪಾದಯಾತ್ರೆಗೆ ವಿಶೇಷ ಮೆರುಗು ನೀಡಿದೆ.

ಉಡುಪಿ ಜಿಲ್ಲಾ ಬಿಜೆಪಿ ತಂಡ ವಿನೂತನ ಹಾಡಿನ ಮೂಲಕ ಪಾದಯಾತ್ರೆಯಲ್ಲಿ ಭಾಗಿಯಾಗಿದೆ.ತಾವೇ ರಚಿಸಿರುವ ಕಾಂಗ್ರೆಸ್ ವಿರೋಧಿ ಹಾಡಿಗೆ ಬಿಜೆಪಿ ಕಾರ್ಯಕರ್ತರು ಹೆಜ್ಜೆ ಹಾಕಿದ್ದಾರೆ.ಹಾಡಿಗೆ ಡೋಲು ಬಾರಿಸಿದ ಶಾಸಕರಾದ ಪ್ರಭು ಚೌಹಾಣ್ ಮತ್ತು ಶರಣು ಸಲಗರ ಸಾಥ್ ನೀಡಿದ್ದಾರೆ.

ಇನ್ನು ಶಾಸಕರ ಡೋಲು ಬಡಿತಕ್ಕೆ ಹುಲಿವೇಷ ತಂಡ ಹೆಜ್ಜೆ ಹಾಕಿದೆ. ಹುಲಿವೇಷ ಪಾದಯಾತ್ರೆಯಲ್ಲಿ ಭಾಗಿಯಾಗಿರೋರಿಗೆ ಹೊಸ ಜೋಶ್ ತುಂಬಿದೆ.

- Advertisement -

Latest News

error: Content is protected !!