Sunday, August 30, 2026
Homeಕರಾವಳಿಉಡುಪಿಉಡುಪಿ:ಕುಡಿದ ಮತ್ತಿನಲ್ಲಿ ಪತ್ನಿಗೆ ಕತ್ತಿಯಿಂದ ಹಲ್ಲೆ ಮಾಡಿ ಡ್ಯಾನ್ಸ್ ಮಾಡಿದ ಪಾಪಿ ಪತಿ

ಉಡುಪಿ:ಕುಡಿದ ಮತ್ತಿನಲ್ಲಿ ಪತ್ನಿಗೆ ಕತ್ತಿಯಿಂದ ಹಲ್ಲೆ ಮಾಡಿ ಡ್ಯಾನ್ಸ್ ಮಾಡಿದ ಪಾಪಿ ಪತಿ

- Advertisement -
- Advertisement -

ಡುಪಿ: ಕುಡಿದ ಮತ್ತಿನಲ್ಲಿ ಪತ್ನಿಗೆ ಕತ್ತಿಯಿಂದ ಹಲ್ಲೆ ಮಾಡಿ ಪಾಪಿ ಪತಿಯೊಬ್ಬ ಡ್ಯಾನ್ಸ್ ಮಾಡಿದ ಘಟನೆ  ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ನಲ್ಲಿ ನಡೆದಿದೆ. ಅನಿತಾ ಹಲ್ಲೆಗೊಳಗಾದ ಮಹಿಳೆ. ಲಕ್ಷ್ಮಣ್ ಹಲ್ಲೆ ಮಾಡಿದ ಪತಿ.

ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವರಾದ ಲಕ್ಷ್ಮಣ ಹಾಗೂ ಅನಿತಾ ದಂಪತಿ ಕಾಶಿಮಠ ಎಂಬಲ್ಲಿ ತೋಟ ನೋಡಿಕೊಳ್ಳುತ್ತಿದ್ದರು.

ನಿನ್ನೆ ಲಕ್ಷ್ಮಣ ಕುಡಿದ ಮತ್ತಿನಲ್ಲಿ ಇಂತಹ ಕೃತ್ಯವೆಸಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅನಿತಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!