Saturday, June 6, 2026
Homeತಾಜಾ ಸುದ್ದಿಹಾಸನ ಅಶ್ಲೀಲ ವೀಡಿಯೋ ಪ್ರಕರಣ; ವೈರಲ್ ಆದ ವೀಡಿಯೋ ಅಸಲಿ ಎಂದ ಎಫ್ ಎಸ್ ಎಲ್...

ಹಾಸನ ಅಶ್ಲೀಲ ವೀಡಿಯೋ ಪ್ರಕರಣ; ವೈರಲ್ ಆದ ವೀಡಿಯೋ ಅಸಲಿ ಎಂದ ಎಫ್ ಎಸ್ ಎಲ್ ವರದಿ

- Advertisement -
- Advertisement -

ಹಾಸನ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸಂದ ಪ್ರಜ್ವಲ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈರಲ್ ಆದ ವೀಡಿಯೋದ ಎಫ್ ಎಸ್ ಎಲ್ ವರದಿ ಹೊರ ಬಿದ್ದಿದ್ದು ವೀಡಿಯೋ ಅಸಲಿ ಎಂದು ವರದಿ ಹೇಳಿದೆ.  

ಇದೀಗ ವರದಿ ಆಧರಿಸಿ ಎಸ್‌ಐಟಿ ಅಧಿಕಾರಿಗಳು, ಶೀಘ್ರವೇ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಎಸ್‌ಐಟಿ ಇದೀಗ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಎರಡು ವಾರದೊಳಗೆ ಚಾರ್ಜ್ ಶೀಟ್ ಸಲ್ಲಿಕೆ ಸಾಧ್ಯತೆ ಎನ್ನಲಾಗುತ್ತಿದೆ. ಸಾಕ್ಷ್ಯವನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಿದೆ.

ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ಅವರಿಗೆ ಸದ್ಯ  ಬೆಳವಣಿಗೆಗಳನ್ನು ನೋಡಿದರೆ ಬಿಡುಗಡೆ ಭಾಗ್ಯವಿಲ್ಲ ಅನ್ಸುತ್ತೆ. ಅಲ್ಲದೇ ಎಫ್ ಎಸ್ ಎಲ್ ವರದಿ ಕೂಡ ಪ್ರಜ್ವಲ್ ಗೆ ವಿರುದ್ಧವಾಗಿ ಬಂದಿದ್ದು ಜೈಲೇ ಫಿಕ್ಸ್ ಆಗುತ್ತಾ ಅನ್ನೋ ಅನುಮಾನಗಳು ಮೂಡುತ್ತಿವೆ.

- Advertisement -

Latest News

error: Content is protected !!