Thursday, June 4, 2026
Homeತಾಜಾ ಸುದ್ದಿವಯನಾಡಿನಲ್ಲಿ ಭೂ ಕುಸಿತ ಪ್ರಕರಣ; ದುರಂತದಲ್ಲಿ 6 ಮಂದಿ ಕನ್ನಡಿಗರು ಸಾವು

ವಯನಾಡಿನಲ್ಲಿ ಭೂ ಕುಸಿತ ಪ್ರಕರಣ; ದುರಂತದಲ್ಲಿ 6 ಮಂದಿ ಕನ್ನಡಿಗರು ಸಾವು

- Advertisement -
- Advertisement -

ಕೇರಳ; ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ 6 ಮಂದಿ ಕನ್ನಡಿಗರು ಕೂಡ ದುರಂತವಾಗಿ ಸಾವನ್ನಪ್ಪಿದ್ದಾರೆ.

ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಸೇರಿ ಆರು ಮಂದಿ ಕರ್ನಾಟಕದವರು ಮೃತಪಟ್ಟಿದ್ದು, ಪುಟ್ಟಸಿದ್ದಶೆಟ್ಟಿ ಮತ್ತು ರಾಣಿ ಅವರ ಶವವನ್ನು ರಕ್ಷಣಾ ತಂಡ ಹೊರಗೆ ತೆಗೆದಿದೆ ಎಂದು ಚಾಮರಾಜನಗರ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಕೇರಳದ ವಯಾನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ ದುರ್ಘಟನೆಯಲ್ಲಿ ಈವರೆಗೆ 151 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸಾವಿರಾರು ಜನರನ್ನು ರಕ್ಷಣಾ ಸಿಬ್ಬಂದಿ ಬಚಾವ್ ಮಾಡಿದ್ದಾರೆ.

- Advertisement -

Latest News

error: Content is protected !!