Saturday, June 6, 2026
Homeಕರಾವಳಿಸಾಕು ಪ್ರಾಣಿಗಳ ಅಂತ್ಯಕ್ರಿಯೆಗೆ ಮಂಗಳೂರು ಪಾಲಿಕೆಯಿಂದ ಪ್ರತ್ಯೇಕ ಶ್ಮಶಾನ

ಸಾಕು ಪ್ರಾಣಿಗಳ ಅಂತ್ಯಕ್ರಿಯೆಗೆ ಮಂಗಳೂರು ಪಾಲಿಕೆಯಿಂದ ಪ್ರತ್ಯೇಕ ಶ್ಮಶಾನ

- Advertisement -
- Advertisement -

ಮಂಗಳೂರು: ನಾಯಿ, ಬೆಕ್ಕುಗಳು ಮೃತಪಟ್ಟಾಗ ಅವುಗಳ ಅಂತ್ಯಕ್ರಿಯೆ ಮಾಡಲು ನಂದಿಗುಂಡ್ಡದಲ್ಲಿರುವ ಶ್ಮಶಾನದ ಪಕ್ಕದ ಜಾಗವನ್ನು ಇದೀಗ ಪ್ರಾಣಿಗಳ ಅಂತ್ಯಸಂಸ್ಕಾರಕ್ಕಾಗಿ ಮೀಸಲಿಡಲು ಮಂಗಳೂರು ಪಾಲಿಕೆ ತೀರ್ಮಾನಿಸಿದೆ.

ಶ್ಮಶಾನಕ್ಕೆ ನಂದಿಗುಡ್ಡೆ ಶ್ಮಶಾನದ ಒಂದು ಭಾಗದಲ್ಲಿ 20 ಸೆಂಟ್ಸ್‌ ಜಾಗ ಗುರುತಿಸಲಾಗಿದ್ದು, ಪಾಲಿಕೆ ಸಭೆಯಲ್ಲಿ ಅನುಮತಿ ಪಡೆಯಲಾಗಿದೆ. ಅನುದಾನ ಕಾಯ್ದಿರಿಸಿ ಶೀಘ್ರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ.

ನಗರದಲ್ಲಿ ಪ್ರಾಣಿಗಳ ಶವ ಸಂಸ್ಕಾರಕ್ಕೆಂದು ಸೂಕ್ತ ವ್ಯವಸ್ಥೆ ಇರಲಿಲ್ಲ. ವಿಶಾಲ ಜಾಗ ಉಳ್ಳವರು ತಮ್ಮ ಮನೆಯ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರೆ, ಅಪಾರ್ಟ್‌ಮೆಂಟ್‌, ಸಣ್ಣ ಜಾಗದಲ್ಲಿ ವಾಸ ಮಾಡುವವರಿಗೆ ತೊಂದರೆ ಆಗುತ್ತಿತ್ತು. ನಗರದೊಳಗೆ ಸಣ್ಣ ಜಾಗ ಗುರುತಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಬೇಕು ಎಂದು ಪ್ರಾಣಿ ಪ್ರಿಯರು ಅನೇಕ ವರ್ಷದಿಂದ ಆಗ್ರಹಿಸುತ್ತಿದ್ದರು.

ಇದೀಗ ಮಂಗಳೂರು ಪಾಲಿಕೆ ಸೂಕ್ತ ಜಾಗವನ್ನು ಕಲ್ಪಿಸಿದೆ.

- Advertisement -

Latest News

error: Content is protected !!