- Advertisement -
![]()
- Advertisement -
ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿರುವ ಕಾರಣ ಕಡಲಿನ ಅಲೆಗಳ ಅಬ್ಬರವೂ ಜೋರಾಗಿದೆ.
ಮಲ್ಪೆ ಸಮೀಪದ ಗುಜ್ಜರಬೆಟ್ಟುವಿನಲ್ಲಿ ತಡೆಗೋಡೆ ಮತ್ತು ತೆಂಗಿನ ಮರ ಸಮುದ್ರ ಪಾಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಇನ್ನು ಬೈಂದೂರು ತಾಲೂಕಿನ ನಾವುಂದ ಕಡಲ ತೀರದಲ್ಲಿ ಕಡಲಿನ ಅಬ್ಬರವನ್ನು ವೀಕ್ಷಿಸುತ್ತಿದ್ದ ಸ್ಥಳೀಯರು ದಡಕ್ಕೆ ಅಪ್ಪಳಿಸಿದ ಅಲೆಗಳಿಂದ ಕೂದಳೆಲೆಯ ಅಂತರದಲ್ಲಿ ಪಾರಾಗಿದ್ದಾರೆ.
ಈ ಮಧ್ಯೆ ಪಡುಬಿದ್ರಿಯಲ್ಲಿ ಕಡಲ್ಕೊರೆತ ತೀವ್ರಗೊಂಡ ಕಾರಣ ನಡಿಪಟ್ಣ ಬೀಚ್ ಸಮೀಪದಲ್ಲಿದ್ದ ಮೀನುಗಾರಿಕಾ ಶೆಡ್ ಕುಸಿತವಾಗಿದೆ.ಇದೇ ವೇಳೆ, ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನೂ ಭಾರತೀಯ ಹವಾಮಾನ ಇಲಾಖೆ ನೀಡಿದೆ.
- Advertisement -


