Tuesday, June 9, 2026
Homeಕರಾವಳಿಮಂಗಳೂರುಮಂಗಳೂರು; ಪೊಲೀಸರಿಂದ ಚಡ್ಡಿ ಗ್ಯಾಂಗ್ ನ ಆರೋಪಿಗಳ ಬಂಧನ ಪ್ರಕರಣ; ಇಂದು ಬೆಳಗ್ಗೆ ಸ್ಥಳ ಮಹಜರಿಗೆ...

ಮಂಗಳೂರು; ಪೊಲೀಸರಿಂದ ಚಡ್ಡಿ ಗ್ಯಾಂಗ್ ನ ಆರೋಪಿಗಳ ಬಂಧನ ಪ್ರಕರಣ; ಇಂದು ಬೆಳಗ್ಗೆ ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ತಪ್ಪಿಸಿಕೊಳ್ಳಲು ಯತ್ನ; ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು

- Advertisement -
- Advertisement -

ಮಂಗಳೂರಿನ  ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯಲ್ಲಿ ನಿನ್ನೆ ನಸುಕಿನ ಜಾವ ದರೋಡೆಮಾಡಿ ಪರಾರಿಯಾಗುತ್ತಿದ್ದ ಚಡ್ಡಿ ಗ್ಯಾಂಗಿನ ನಾಲ್ವರು ಆರೋಪಿಗಳನ್ನು ಪೊಲೀಸರು  ಘಟನೆ ನಡೆದ 5 ಗಂಟೆಯೊಳಗೆ ಬಂಧಿಸಿದ್ದರು. ಕೆಎಸ್ ಆರ್ ಟಿಸಿ ಬಸ್ ನಲ್ಲಿ ಆರೋಪಿಗಳು ಬೆಂಗಳೂರಿಗೆ ಪರಾರಿಯಾಗುತ್ತಿದ್ದಾಗ ಅವರನ್ನು ಸಕಲೇಶಪುರದಲ್ಲಿ ಅರೆಸ್ಟ್ ಮಾಡಿದ್ದರು.

ಇಂದು ಬೆಳಗ್ಗೆ ಬಂಧಿತ ಆರೋಪಿಗಳನ್ನು ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯಲ್ಲಿರುವ ಕಳ್ಳತನ ಮಾಡಿದ್ದ ವಿಕ್ಟರ್ ಮೆಂಡೋನ್ಸಾ ಅವರ ಮನೆಗೆ ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಎಎಸ್ ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ ಇಬ್ಬರು ಆರೋಪಿಗಳು. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಇನ್ನು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!