Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘ (ರಿ)ಬೆಳ್ತಂಗಡಿ. ಇದರ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷರಾದ ವಿನಯ್ ಹೆಗ್ಡೆ ನಾರಾವಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ದಯಾನಂದ ಸಂಜಯನಗರ ಸ್ವಾಗತಿಸಿ ಸಂಘದ ಖರ್ಚು ವೆಚ್ಚವನ್ನು ಮಂಡಿಸಿದರು.

ಸಂಘದ ಗೌರವಾಧ್ಯಕ್ಷರಾಗಿ  ಗಿರಿರಾಜ್ ಬಾರಿತ್ತಾಯ ಅಧ್ಯಕ್ಷರಾಗಿ ವಿನಯ್ ಹೆಗ್ಡೆ ನಾರಾವಿ ಮತ್ತು ಕಾರ್ಯದರ್ಶಿಯಾಗಿ ದಯಾನಂದ್ ಸಂಜಯನಗರ ಇವರನ್ನೂ ಮುಂದುವರಿಸುವುದೆಂದು ತೀರ್ಮಾನಿಸಲಾಯಿತು. ಸಂಘದ  ಉಪಾಧ್ಯಕ್ಷರಾಗಿ ಗಣೇಶ್ ಕಾಣಾಲ್, ರಫೀಕ್ ಬಾಂಬಿಲ, ಕೋಶಾಧಿಕಾರಿಯಾಗಿ ಜಯಕುಮಾರ್ ಕಲ್ಲಗುಡ್ಡೆ ಜೊತೆ ಕಾರ್ಯದರ್ಶಿಯಾಗಿ ರೋಹಿತ್ ಧರ್ಮಸ್ಥಳ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವಸಂತ್ ಮಜಲ್, ಮಂಜುನಾಥ್ ಕಾಮತ್, ಜನಾರ್ಧನ ಗೌಡ, ವಿಶ್ವನಾಥ್ ಲಾಯಿಲ, ರಾಜಪ್ರಕಾಶ್ ಪಡ್ಡಾಯಿ ಇವರನ್ನು ಸಂಘದ ಸಲಹೆಗಾರರಾಗಿ ಆರಿಸಲಾಯಿತು.ಕಾರ್ಯಕಾರಿಣಿ ಸದಸ್ಯರಾಗಿ ನವಾಝ್ , ಅಧಿಷ್ ಕಾಮತ್,ರಾಘವೇಂದ್ರ, ಮನೋಜ್, ದಿಶಾಂತ್ ಮಿತ್ತಮಾರ್, ಸುಜಿತ್ ಚಂದ್ರಪಾಲ್, ಗಣೇಶ್ ಲಾಯಿಲ, ಧನಂಜಯ್ ರಾವ್, ನಝೀರ್ ಶಕ್ತಿನಗರ, ರವಿ ಗುಂಪಲಾಜೆ, ಸಹದೇವ್ ಉಜಿರೆ ಆಯ್ಕೆಯಾದರು ಸಭೆಯ ಮುಂಚಿತವಾಗಿ ಮಾಜಿ ಶಾಸಕರಾದ ದಿವಂಗತ ವಸಂತ್ ಬಂಗೇರ ಇವರಿಗೆ ನುಡಿನಮನ ಸಲ್ಲಿಸಲಾಯಿತು.

- Advertisement -

Latest News

error: Content is protected !!