Saturday, June 6, 2026
Homeತಾಜಾ ಸುದ್ದಿನಟ ದರ್ಶನ್ ಜೈಲುಪಾಲು ಹಿನ್ನೆಲೆ; ಕರಾವಳಿ ಸಿನಿಮಾದಿಂದ ಡಿ ಬಾಸ್ ರನ್ನು ಕೈ ಬಿಟ್ಟ ಚಿತ್ರತಂಡ

ನಟ ದರ್ಶನ್ ಜೈಲುಪಾಲು ಹಿನ್ನೆಲೆ; ಕರಾವಳಿ ಸಿನಿಮಾದಿಂದ ಡಿ ಬಾಸ್ ರನ್ನು ಕೈ ಬಿಟ್ಟ ಚಿತ್ರತಂಡ

- Advertisement -
- Advertisement -

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಹೀಗಾಗಿ ಅವರನ್ನು ನಟ ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಚಿತ್ರದಿಂದ ಕೈಬಿಡಲಾಗಿದೆ ಎನ್ನಲಾಗಿದೆ.

ಕರಾವಳಿ ಚಿತ್ರವನ್ನು ಗುರುದತ್ ಗಾಣಿಗ ಅವರು ನಿರ್ದೇಶನ ಮಾಡುತ್ತಿದ್ದಾರೆ.ಈ ಚಿತ್ರವು ನಟ ದರ್ಶನ್ ಅವರನ್ನು ಒಳಗೊಂಡಿತ್ತು. ಆದ್ರೇ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿದ್ದಾರೆ.ಈ ಹಿನ್ನಲೆಯಲ್ಲಿ ಅವರನ್ನು ಚಿತ್ರದಿಂದ ಕೈಬಿಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

ದರ್ಶನ್ ಕೈ ಬಿಟ್ಟು ಪ್ರಜ್ವಲ್ ದೇವರಾಜ್ ನಟನೆಯಲ್ಲೇ ಕರಾವಳಿ ಚಿತ್ರವನ್ನು ತೆರೆಗೆ ತರೋ ಪ್ಲಾನ್ ಅನ್ನ ಚಿತ್ರತಂದ ಮಾಡುತ್ತಿದೆ ಎನ್ನಲಾಗುತ್ತಿದೆ. ನಟ ಸುದೀಪ್ ಅವರ ಶಿಷ್ಯ ಗುರುದತ್ ಗಾಣಿಗ ಅವರು ಆಗಿದ್ದು, ಅವರಿಗೆ ಸುದೀಪ್ ಸಾಥ್ ಕೊಡ್ತಾರಾ ಅಂತ ಕಾದು ನೋಡಬೇಕಿದೆ.

- Advertisement -

Latest News

error: Content is protected !!