Wednesday, June 3, 2026
Homeಉದ್ಯಮಉದ್ಯಮಿ ಮುಕೇಶ್‌ ಅಂಬಾನಿ ಪುತ್ರನ ಸಂಗೀತ್‌ಗೆ ಖ್ಯಾತ ಪಾಪ್‌ ಗಾಯಕ ಜಸ್ಟಿನ್ ಬೀಬರ್‌; 83 ಕೋಟಿ...

ಉದ್ಯಮಿ ಮುಕೇಶ್‌ ಅಂಬಾನಿ ಪುತ್ರನ ಸಂಗೀತ್‌ಗೆ ಖ್ಯಾತ ಪಾಪ್‌ ಗಾಯಕ ಜಸ್ಟಿನ್ ಬೀಬರ್‌; 83 ಕೋಟಿ ರೂ. ಸಂಭಾವನೆ.!

- Advertisement -
- Advertisement -

ಮುಂಬಯಿ: ಉದ್ಯಮಿ ಮುಕೇಶ್‌ ಹಾಗೂ ನೀತಾ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಸಂಗೀತ್‌ ಕಾರ್ಯಕ್ರಮಕ್ಕಾಗಿ ಖ್ಯಾತ ಪಾಪ್‌ ಗಾಯಕ ಜಸ್ಟಿನ್ ಬೀಬರ್‌ ಮುಂಬಯಿಗೆ ಆಗಮಿಸಿದ್ದಾರೆ.

ಜಸ್ಟಿನ್‌ 7 ವರ್ಷದ ಬಳಿಕ ಭಾರತಕ್ಕೆ ಬಂದಿದ್ದು, ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ್ ನಲ್ಲಿ ಮ್ಯೂಸಿಕ್‌ ಪ್ರೋಗ್ರಾಂ ನೀಡಲು ಜಸ್ಟಿನ್‌ ಬರೋಬ್ಬರಿ 83ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. 

ಅವರು ಜು.4 ಗುರುವಾರದಂದು ಮುಂಬಯಿಗೆ ಬರಲಿದ್ದು, ಜು.5 ಶುಕ್ರವಾರದಂದು ಸಂಗೀತ್‌ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಖ್ಯಾತನಾಮರು ಭಾಗಿಯಾಗಲಿದ್ದಾರೆ.

ಅನಂತ್ ಮತ್ತು ರಾಧಿಕಾ ಅವರ ಸಂಗೀತ ಸಮಾರಂಭ ಜುಲೈ 5 ರಂದು ಮುಂಬೈಯ ಅವರ ನಿವಾಸ ಆಂಟಿಲಿಯಾದಲ್ಲಿ ನಡೆಯಲಿದೆ. ಜು.12 ರಂದು ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

- Advertisement -

Latest News

error: Content is protected !!