Friday, October 2, 2026
Homeಕರಾವಳಿಮಂಗಳೂರುರಾಜ್ಯ ಸರ್ಕಾರದಿಂದ ಸಿಗದ ಬೆಂಬಲ:ಏಷ್ಯನ್ ಗೇಮ್ಸ್ ಪದಕ ವಿಜೇತೆ ಪೂವಮ್ಮ ಬೇಸರ

ರಾಜ್ಯ ಸರ್ಕಾರದಿಂದ ಸಿಗದ ಬೆಂಬಲ:ಏಷ್ಯನ್ ಗೇಮ್ಸ್ ಪದಕ ವಿಜೇತೆ ಪೂವಮ್ಮ ಬೇಸರ

- Advertisement -
- Advertisement -

ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಇತರ ರಾಜ್ಯಗಳ ಅಥ್ಲೀಟ್‌ಗಳಿಗೆ ಕೋಟಿಗಟ್ಟಲೆ ನಗದು ಬಹುಮಾನ ಸಿಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಕ್ರೀಡಾಪಟುಗಳಿಗೆ ಸೂಕ್ತ ಬೆಂಬಲ ನೀಡದಿರುವುದು ತೀವ್ರ ಬೇಸರ ತಂದಿದೆ ಎಂದು ಮಹಿಳೆಯರ 4×400 ಮೀಟರ್ ರಿಲೇ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಧನೆ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. “ಜಪಾನ್‌ನಲ್ಲಿ ಪದಕ ಗೆದ್ದ ತಕ್ಷಣ ಇತರ ರಾಜ್ಯಗಳ ಅಥ್ಲೀಟ್‌ಗಳಿಗೆ ಅವರ ರಾಜ್ಯದ ಮುಖ್ಯಮಂತ್ರಿಗಳು ಕರೆ ಮಾಡಿ ಅಭಿನಂದನೆ ತಿಳಿಸಿದರು. ಆದರೆ ಕರ್ನಾಟಕದಿಂದ ನನಗೆ ಯಾವುದೇ ಅಧಿಕೃತ ಕರೆ ಬರಲಿಲ್ಲ” ಎಂದು ನೋವು ತೋಡಿಕೊಂಡರು.

ನಂತರ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಕರೆ ಮಾಡಿ ಸೂಕ್ತ ಗೌರವ ಹಾಗೂ ನಗದು ಬಹುಮಾನದ ಭರವಸೆ ನೀಡಿದ್ದಾರೆ ಎಂದ ಅವರು, ರಾಜ್ಯ ಮತ್ತು ದೇಶದ ಕೀರ್ತಿ ಎತ್ತಿಹಿಡಿದ ಅಥ್ಲೀಟ್‌ಗಳಿಗೆ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಕ್ಷಣವೇ ನಗದು ಬಹುಮಾನ ಘೋಷಿಸಬೇಕು ಎಂದು ಒತ್ತಾಯಿಸಿದರು. ಭವಿಷ್ಯದ ಯೋಜನೆಗಳ ಬಗ್ಗೆ ಸದ್ಯಕ್ಕೆ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

- Advertisement -

Latest News

error: Content is protected !!