Friday, June 5, 2026
Homeಕರಾವಳಿದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಹೀಗೊಂದು ಫೇರ್ ವೆಲ್; ಅಪರೂಪದ  ಕ್ಷಣಕ್ಕೆ ಸಾಕ್ಷಿಯಾದ ಮೂಡಬಿದಿರೆ ಪೊಲೀಸ್...

ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಹೀಗೊಂದು ಫೇರ್ ವೆಲ್; ಅಪರೂಪದ  ಕ್ಷಣಕ್ಕೆ ಸಾಕ್ಷಿಯಾದ ಮೂಡಬಿದಿರೆ ಪೊಲೀಸ್ ಠಾಣೆ

- Advertisement -
- Advertisement -

ಮೂಡಬಿದಿರೆ: ನಾವು ಮಾಡುವ ಕೆಲಸದಲ್ಲಿ ದಕ್ಷತೆ, ಬದ್ಧತೆ, ಪ್ರಾಮಾಣಿಕತೆ ಇದ್ದರೆ ನಮಗೆ ಒಂದಲ್ಲ ಒಂದು ದಿನ ಖಂಡಿತವಾಗಿಯೂ ಬೆಲೆ ಸಿಕ್ಕೇ ಸಿಗುತ್ತೆ. ಒಂದು ಮಾತಿದೆ ನಾನವು ಮಾತನಾಡಬಾರದು ನಾವು ಮಾಡುವ ಕೆಲಸ ಮಾತನಾಡಬೇಕು ಅಂತಾ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಮೂಡಬಿದರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿದ್ದ ದಿವಾಕರ್ ರೈ.

ಮೂಡಬಿದರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿದ್ದ ದಿವಾಕರ್ ರೈ 39 ವರ್ಷಗಳ ಸುದೀರ್ಘ ಸೇವೆಗೈದು ಮೊನ್ನೆ ನಿವೃತ್ತರಾದರು. ತಮ್ಮ ವೃತ್ತಿ ಜೀವನದುದ್ದಕ್ಕೂ ದಕ್ಷ ಅಧಿಕಾರಿಯೆಂದು ಹೆಸರು ಗಳಿಸಿದ್ದ ದಿವಾಕರ್ ರೈ ಅವರು ನಿವೃತ್ತಿ ಹೊಂದಿದ್ದಾರೆ. ಅವರಿಗಾಗಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅವರ ಸಹೋದ್ಯೋಗಿಗಳು ಪುಷ್ಪಾರ್ಚನೆಯ ಗೌರವ ಸಲ್ಲಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಹೇಗಿದ್ದರು ಅನ್ನೋದಕ್ಕೆ ಈ ಅಪರೂಪದ ಕ್ಷಣವೇ ಸಾಕ್ಷಿಯಾಗಿತ್ತು.

ಇನ್ನು ನಿವೃತ್ತಿಯಾದ ಬಳಿಕ ದಿವಾಕರ್ ರೈ ಅವರು ಪೊಲೀಸ್ ಠಾಣೆಯಿಂದ ಮನೆಗೆ ಹೋಗಲು ಪೊಲೀಸ್ ಜೀಪ್ ಏರೋವರೆಗೂ ಅವರ ಸಹೋದ್ಯೋಗಿಗಳು ಹೂವಿನ ಮಳೆಗೆರೆದಿದ್ದಾರೆ. ಬಳಿಕ ಯೂನಿಫಾರ್ಮ್ ಧರಿಸಿ ಪೊಲೀಸ್ ಜೀಪ್ ನಲ್ಲೇ ಮನೆಗೆ ತೆರಳಿದ್ರು. ಸಹೋದ್ಯೋಗಿಗಳ ಪ್ರೀತಿಗೆ ದಿವಾಕರ್ ರೈ ಆನಂದ ಭಾಷ್ಪ ಸುರಿಸಿದರು.

- Advertisement -

Latest News

error: Content is protected !!