Saturday, June 13, 2026
Homeಕರಾವಳಿಮಂಗಳೂರುಸುಳ್ಯ; ಪತ್ನಿಗೆ ಚೂರಿ ಇರಿದ ಪತಿ; ಮಹಿಳೆ ಆಸ್ಪತ್ರೆಗೆ ದಾಖಲು

ಸುಳ್ಯ; ಪತ್ನಿಗೆ ಚೂರಿ ಇರಿದ ಪತಿ; ಮಹಿಳೆ ಆಸ್ಪತ್ರೆಗೆ ದಾಖಲು

- Advertisement -
- Advertisement -

ಸುಳ್ಯ; ಪತಿಯೊಬ್ಬ ತನ್ನ ಪತ್ನಿಗೆ ಚೂರಿಯಿಂದ ಇರಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಜಾಲ್ಸೂರು ಗ್ರಾಮದ 25 ವರ್ಷದ ಮಹಿಳೆಯೊಬ್ಬರನ್ನು 6 ವರ್ಷಗಳ ಹಿಂದೆ ನವೀನ್‌ ಕುಮಾರ್‌ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಆತ ಪತ್ನಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಆಕೆ ನಾಲ್ಕು ವರ್ಷಗಳಿಂದ  ವಿನೋಭಾನಗರದಲ್ಲಿರುವ ತಮ್ಮ ತವರು ಮನೆಯಲ್ಲಿ ವಾಸವಿದ್ದರು. 

ಜೂ.28ರಂದು ರಾತ್ರಿ ಅಲ್ಲಿಗೆ ಹೋಗಿದ್ದ ನವೀನ್‌ ಕುಮಾರ್ ಪತ್ನಿಗೆ ಚೂರಿಯಿಂದ ಹಲ್ಲೆ ನಡೆಸಿದ್ದು, ಮಹಿಳೆಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!