Saturday, June 6, 2026
Homeತಾಜಾ ಸುದ್ದಿಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸೂರಜ್ ರೇವಣ್ಣ ವಿರುದ್ಧ ಆಪ್ತನಿಂದಲೇ ಮತ್ತೊಂದು ದೂರು ದಾಖಲು

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸೂರಜ್ ರೇವಣ್ಣ ವಿರುದ್ಧ ಆಪ್ತನಿಂದಲೇ ಮತ್ತೊಂದು ದೂರು ದಾಖಲು

- Advertisement -
- Advertisement -

ಹಾಸನ : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.ಸೂರಜ್  ಆಪ್ತನೊಬ್ಬ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾನೆ. 4 ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಸೂರಜ್ ನನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು  ಆರೋಪಿಸಿ ಸಂತ್ರಸ್ಥ ದೂರು ನೀಡಿದ್ದಾನೆ. ನಾಲ್ಕು ದಿನಗಳ ಹಿಂದೆ ಸೂರಜ್ ಪರವಾಗಿ ದೂರು ಕೊಟ್ಟಿದ್ದ ಅದೇ ಯುವಕ ಇದೀಗ ಸೂರಜ್ ರೇವಣ್ಣ ವಿರುದ್ಧವೇ ದೂರು ದಾಖಲಿಸಿದ್ದಾನೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಯುವಕನಿಂದ ದೂರು ದಾಖಲಾಗಿದೆ. 10 ಪುಟಗಳ ಸುದೀರ್ಘ ದೂರ ದಾಖಲಿಸಿದ್ದಾನೆ. ಜೂನ್ 22ರಂದು ಅರಕಲಗೂಡು ಮೂಲದ ಯುವಕ ದೂರು ನೀಡಿದ್ದ. ಜೆಡಿಎಸ್ MLC ಸೂರಜ್ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದ. ಇಂದು ಹೊಳೆನರಸೀಪುರ ಮೂಲದ ಯುವಕ ಠಾಣೆಗೆ ದೂರು ನೀಡಿದ್ದಾನೆ.

- Advertisement -

Latest News

error: Content is protected !!