Thursday, June 4, 2026
Homeಕರಾವಳಿಪುತ್ತೂರು:ಫ್ರಿಡ್ಜ್  ಬಳಸೋದಕ್ಕೆ ಹೆದರುವಂತಾಗಿದೆ ಪರಿಸ್ಥಿತಿ: ಕರಾವಳಿಯಲ್ಲಿ ಮತ್ತೊಂದು ರೆಫ್ರಿಜರೇಟರ್ ಸ್ಫೋಟ ಪ್ರಕರಣ

ಪುತ್ತೂರು:ಫ್ರಿಡ್ಜ್  ಬಳಸೋದಕ್ಕೆ ಹೆದರುವಂತಾಗಿದೆ ಪರಿಸ್ಥಿತಿ: ಕರಾವಳಿಯಲ್ಲಿ ಮತ್ತೊಂದು ರೆಫ್ರಿಜರೇಟರ್ ಸ್ಫೋಟ ಪ್ರಕರಣ

- Advertisement -
- Advertisement -

ಪುತ್ತೂರು: ಕರಾವಳಿಯ ಮಂದಿ ಇದೀಗ ಫ್ರಿಡ್ಜ್ ಬಳಸಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವಾರದ ಹಿಂದೆ ಕಡಬದಲ್ಲಿ ನಡೆದ ಫ್ರಿಡ್ಜ್ ಬ್ಲಾಸ್ಟ್ ಪ್ರಕರಣ ಮಾಸುವ ಮುನ್ನವೇ ಇದೀಗ ಅಂತಹದ್ದೇ ಘಟನೆಯೊಂದಕ್ಕೆ ಪುತ್ತೂರು ಸಾಕ್ಷಿಯಾಗಿದೆ.

ಪುತ್ತೂರಿನ  ಜಿಡೆಕಲ್ಲು ಕಾಲೇಜು ಸಮೀಪದ ಮೋನಪ್ಪ ಎಂಬವರ ಮನೆಯಲ್ಲಿ ರೆಫ್ರಿಜರೇಟರ್ ಸ್ಫೋಟವಾಗಿದೆ.

ರೆಫ್ರಿಜರೇಟರ್ ಸ್ಫೋಟಗೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಆದೆರ ಮನೆಗೆ ಹಾನಿ ಉಂಟಾಗಿದೆ.

ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

Latest News

error: Content is protected !!