Saturday, June 29, 2024
Homeತಾಜಾ ಸುದ್ದಿಮೋದಿ-ಪೋಪ್ ಭೇಟಿ ಫೋಟೋ ಕುರಿತು ವಿವಾದ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್! ಏನಿದು ವಿವಾದ?

ಮೋದಿ-ಪೋಪ್ ಭೇಟಿ ಫೋಟೋ ಕುರಿತು ವಿವಾದ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್! ಏನಿದು ವಿವಾದ?

spot_img
- Advertisement -
- Advertisement -

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ವ್ಯಾಟಿಕನ್‌ ನಲ್ಲಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್‌ ಘಟಕ ಕ್ರಿಶ್ಚಿಯನ್‌ ಸಮುದಾಯದ ಬಳಿ ಕ್ಷಮೆಯಾಚಿಸಿದೆ.

ಭಾನುವಾರ (ಜೂನ್‌ 16) ಕೇರಳ ಕಾಂಗ್ರೆಸ್‌ ಘಟಕ, ಪ್ರಧಾನಿ ಮೋದಿ ಮತ್ತು ಪೋಪ್‌ ಅವರ ಫೋಟೋವನ್ನು ಎಕ್ಸ್‌ ನಲ್ಲಿ ಶೇರ್‌ ಮಾಡಿ, “ಕೊನೆಗೂ ಪೋಪ್‌ ಅವರಿಗೆ ದೇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು” ಎಂದು ಕ್ಯಾಪ್ಶನ್‌ ಹಾಕಿತ್ತು.

 ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಪೋಸ್ಟ್‌ ಅನ್ನು ಗಮನಿಸಿದ ಬಿಜೆಪಿ, ಇದು ಕ್ರೈಸ್ತ ಸಮುದಾಯಕ್ಕೆ ಮಾಡಿದ ಅಪಮಾನ. ಕಾಂಗ್ರೆಸ್‌ ಇಂತಹ ಕೀಳುಮಟ್ಟದ ನಡವಳಿಕೆಯನ್ನು ಬಿಡಬೇಕು ಎಂದು ಟೀಕಿಸಿತ್ತು.

The@INCIndia ಕೇರಳದ ಎಕ್ಸ್‌ ಖಾತೆಯನ್ನು ತೀವ್ರಗಾಮಿ ಇಸ್ಲಾಮ್‌ ಅಥವಾ ನಗರ ನಕ್ಸಲೀಯರು ಹ್ಯಾಂಡಲ್‌ ಮಾಡುತ್ತಿದ್ದು, ಅವರು ರಾಷ್ಟ್ರೀಯವಾದಿ ನಾಯಕರನ್ನು ಗುರಿಯಾಗಿರಿಸಿಕೊಂಡು ಮಾನಹಾನಿಕರ ಪೋಸ್ಟ್‌ ಗಳನ್ನು ಶೇರ್‌ ಮಾಡುತ್ತಿರುವುದಾಗಿ ಬಿಜೆಪಿ ಕಟು ವಾಗ್ದಾಳಿ ನಡೆಸಿದೆ.

- Advertisement -
spot_img

Latest News

error: Content is protected !!