Friday, October 16, 2026
Homeಕರಾವಳಿಬೆಳ್ತಂಗಡಿ; ಹೃದಯಾಘಾತದಿಂದ ಮಹಿಳೆ ನಿಧನ

ಬೆಳ್ತಂಗಡಿ; ಹೃದಯಾಘಾತದಿಂದ ಮಹಿಳೆ ನಿಧನ

- Advertisement -
- Advertisement -

ಬೆಳ್ತಂಗಡಿ; ಹೃದಯಾಘಾತದಿಂದ ಮಹಿಳೆ ನಿಧನವಾಗಿರುವ ಘಟನೆ ಬಂದಾರು ಗ್ರಾಮದ ಪಾಣೆಕಲ್ಲಿನಲ್ಲಿ ನಡೆದಿದೆ. ಸುರೇಶ್ ಗೌಡ ಇವರ ಪತ್ನಿ ನಿರ್ಮಲ (41) ಮೃತ ದುರ್ದೈವಿ.

ಇಂದು ಬೆಳಗ್ಗೆ ನಿರ್ಮಲ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ 108 ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅದಾಗಲೇ  ಹೃದಯಾಘಾತದಿಂದ ನಿಧನರಾಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಇನ್ನು  ನಿರ್ಮಲ ಅವರು ತನ್ನ ಪತಿಯೊಂದಿಗೆ ಪದ್ಮುಂಜ ಕೊಲ್ಲಾಜೆ ಕಾಂಪ್ಲೆಕ್ಸ್ ನಲ್ಲಿ ತಮ್ಮದೇ ಸ್ವಂತ ಪ್ರಾರ್ಥನಾ ಫ್ಯಾಷನ್ ಅಂಗಡಿ ಜೊತೆಗೆ  ಟೈಲರ್ ವೃತ್ತಿ ನಡೆಸುತ್ತಿದ್ದರು.ಅವರು ಅತ್ತೆ ಕಮಲ ,ಪತಿ ಸುರೇಶ್ ಗೌಡ, ಮಕ್ಕಳಾದ  ಜ್ಞಾನಶ್ರೀ, ಪ್ರಾರ್ಥನಾ, ವೇದಿಕ ಹಾಗೂ ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!