Saturday, June 6, 2026
Homeಕರಾವಳಿಮಂಗಳೂರುರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತ ಇಲ್ಲ, ಜಿ.ಪಂ. ಕಚೇರಿಯಲ್ಲಿ ಗ್ಯಾರಂಟಿ ಆಫೀಸ್; ವಿಧಾನ ಪರಿಷತ್ ಸದಸ್ಯ...

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತ ಇಲ್ಲ, ಜಿ.ಪಂ. ಕಚೇರಿಯಲ್ಲಿ ಗ್ಯಾರಂಟಿ ಆಫೀಸ್; ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿಕೆ

- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ‌‌ಗಳನ್ನು ನಿಲ್ಲಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಹೇಳಿಕೆ ನೀಡಿದ ಐವಾನ್ ಡಿಸೋಜಾ, ಗ್ಯಾರಂಟಿ ಯೋಜನೆ ರಾಜ್ಯ ಚುನಾವಣೆಯಲ್ಲಿ ಜನರಿಗೆ ಕೊಟ್ಟ ವಾಗ್ದಾನವಾಗಿದ್ದು ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಯಾರಿಗೆ ಸಿಕ್ಕಿಲ್ಲವೋ ಅವರಿಗೆ ಹುಡುಕಿ ಕೊಡಲು ಗ್ಯಾರಂಟಿ ಸಮಿತಿ ರಚನೆ ಮಾಡಲಾಗಿದ್ದು ಮುಂದೆ ಗ್ಯಾರಂಟಿ ಕಚೇರಿ ಕೂಡಾ ತೆರೆಯಲಾಗುತ್ತದೆ ಎಂದು ಹೇಳಿರುವ ಐವಾನ್, ಯೋಜನೆಗೆ ಅರ್ಹರಿದ್ದೂ ಫಲಾನಭವಿಗಳಾಗದಿರುವವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗ್ಯಾರಂಟಿ ಕಚೇರಿಗೆ ಬರಬಹುದು ಎಂದು ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿಯವರು ಹೊಟ್ಟೆ ಕಿಚ್ಚಿನಿಂದ‌ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಐವಾನ್ ಡಿಸೋಜಾ ಟೀಕಿಸಿದ್ದಾರೆ

- Advertisement -

Latest News

error: Content is protected !!