Sunday, June 7, 2026
Homeಕರಾವಳಿಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

- Advertisement -
- Advertisement -

ಬೆಳ್ತಂಗಡಿ: ದಿಡುಪೆ ಸುತ್ತಮುತ್ತ, ಶಿಶಿಲ, ಧರ್ಮಸ್ಥಳ ಭಾಗದಲ್ಲಿ ಬುಧವಾರ ಸಂಜೆ ಗಾಳಿ ಸಹಿತ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಮನೆ, ರಸ್ತೆಗೆ ಮರ ಬಿದ್ದು ವಿವಿದೆಢೆಗಳಲ್ಲಿ ಹಾನಿಯಾಗಿದೆ.

ಶಿಶಿಲ ಗ್ರಾಮದ ಉಮ್ಮಂತಿಮಾರಿನಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು. ಕೊಳಂಬೆಯಲ್ಲಿಯೂ ಮರಗಳು ರಸ್ತೆಗೆ ಬಿದ್ದಿದ್ದು, ವೈಕುಂಠಪುರ ಕಾಲನಿಯ ಸೇಸಪ್ಪ ಮಲೆಕುಡಿಯ ಅವರ ಮನೆ ಮೇಲೆ ಮರ ಬಿದ್ದು ಹಂಚಿನ ಮೇಲ್ಛಾವಣಿ ಸಂಪೂರ್ಣ ಹಾನಿಗೀಡಾಗಿದೆ. ಅವರ ಮಗನಿಗೆ ಶೀಟ್‌ನ ಭಾಗ ಬಿದ್ದು ಗಾಯವಾಗಿದೆ. ಮನೆಮಂದಿ ಪಕ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು ಮತ್ತು ಸ್ಥಳೀಯ ಯುವಕರ ಸಹಕಾರದಿಂದ ಮರ ತೆರವುಗೊಳಿಸಲಾಗಿದೆ. ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧಿನ್‌ ಶಿಶಿಲ, ಗ್ರಾಮ ಸಹಾಯಕ ವೀರಪ್ಪ ಗೌಡ, ಸಿಬಂದಿ ಸುಂದರ ಶಿಶಿಲ ಭೇಟಿ ಸ್ಥಳಕ್ಕೆ ನೀಡಿದರು.

- Advertisement -

Latest News

error: Content is protected !!