Saturday, June 6, 2026
Homeಅಪರಾಧಬೇಲಿಯ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ; ಘಟನೆಯ ವಿರುದ್ಧ ಪ್ರಕರಣ ದಾಖಲು..!

ಬೇಲಿಯ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ; ಘಟನೆಯ ವಿರುದ್ಧ ಪ್ರಕರಣ ದಾಖಲು..!

- Advertisement -
- Advertisement -

ಪುತ್ತೂರು: ಇಲ್ಲಿನ ಬಲ್ನಾಡು ಎಂಬಲ್ಲಿ ವ್ಯಕ್ತಿಯೋರ್ವರೊಂದಿಗೆ ಬೇಲಿಯ ವಿಚಾರದಲ್ಲಿ ತಕರಾರು ತೆಗೆದುಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಗೊಳಗಾದವರನ್ನು ರವಿ ಹಾಗೂ ಅವರ ಮಗ ಲೋಕೇಶ ಎಂದು ಗುರುತಿಸಲಾಗಿದೆ. ಇವರ ಮೇಲೆ ಹಲ್ಲೆ ನಡೆಸಿದವರು ಬಾಳು ಎಂದು ತಿಳಿದು ಬಂದಿದೆ. 

ಘಟನೆಯ ವಿವರ: ಪುತ್ತೂರು ತಾಲೂಕು ಬಲ್ನಾಡು ನಿವಾಸಿ ರವಿ (53) ಎಂಬವರ ದೂರಿನಂತೆ, ನೆರೆಮನೆಯ ನಿವಾಸಿ ಬಾಲು (43) ಎಂಬಾತನು, ಮನೆ ಬಳಿ ಬಂದು ಬೇಲಿಯ ವಿಚಾರದಲ್ಲಿ ತಕರಾರು ತೆಗೆದು, ಆತನ ಕೈಯಲ್ಲಿದ್ದ ಕತ್ತಿಯಿಂದ ರವಿ ಅವರಿಗೆ ಹಲ್ಲೆ ನಡೆಸಿರುತ್ತಾನೆ. ಈ ವೇಳೆ ಜಗಳ ಬಿಡಿಸಲು ಬಂದ ರವಿ ಅವರ ಮಗನಿಗೂ ಹಲ್ಲೆ ನಡೆಸಿರುತ್ತಾನೆ.

ಚಿಕಿತ್ಸೆಗಾಗಿ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ರವಿ ಅವರನ್ನ ಒಳರೋಗಿಯನ್ನಾಗಿ ದಾಖಲಿಸಿದ್ದು ಲೋಕೇಶನನ್ನು ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ಮೇರೆಗೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 57-2024 ಕಲಂ: IPC U/S: 324 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!