Sunday, August 30, 2026
Homeಕರಾವಳಿಉಡುಪಿಕರ್ನಾಟಕದಲ್ಲಿ ಕೊಲ್ಲೂರು ಕಾರಿಡಾರ್ ಮಾಡಿಯೇ ಮಾಡುತ್ತೇವೆ; ಬೈಂದೂರಿನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿಕೆ

ಕರ್ನಾಟಕದಲ್ಲಿ ಕೊಲ್ಲೂರು ಕಾರಿಡಾರ್ ಮಾಡಿಯೇ ಮಾಡುತ್ತೇವೆ; ಬೈಂದೂರಿನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿಕೆ

- Advertisement -
- Advertisement -

ಉಡುಪಿ: ದಕ್ಷಿಣ ಭಾರತದಲ್ಲೂ ಟೆಂಪಲ್ ಕಾರಿಡಾರ್ ಆಗಬೇಕಾಗಿದ್ದು, ಕರ್ನಾಟಕದಲ್ಲಿ ಕೊಲ್ಲೂರು ಕಾರಿಡಾರ್ ಮಾಡುವ ಸಮಯ ಬಂದಿದೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.

ಬೈಂದೂರಿನಲ್ಲಿ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ನಡೆದ ರೋಡ್ ಶೋ ವೇಳೆ ಮಾತನಾಡಿದ ಅಣ್ಣಾಮಲೈ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕೊಲ್ಲೂರಿಗೆ ಕರೆದುಕೊಂಡು ಬರಬೇಕಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಪ್ರಧಾನಿ ಮೋದಿಯವರು ಮೂಕಾಂಬಿಕಾ ದೇವಿಯ ದರ್ಶನ ಮಾಡಬೇಕೆಂದು ಜನ ಬಯಸಿದ್ದಾರೆ ಎಂದು ಹೇಳಿರುವ ಅಣ್ಣಾಮಲೈ,
ಖಂಡಿತವಾಗಿ ಕೊಲ್ಲೂರು ಕಾರಿಡಾರ್ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಾರಣಾಸಿ, ಉಜ್ಜಯಿನಿ, ಅಯೋಧ್ಯೆ ಎಲ್ಲಾ ಕಡೆ ಟೆಂಪಲ್ ಕಾರಿಡಾರ್ ನಿರ್ಮಾಣವಾಗಿದ್ದು, ಕೊಲ್ಲೂರು ಇಂಟರ್ ನ್ಯಾಷನಲ್ ಡೆಸ್ಟಿನೇಷನ್ ಆಗುತ್ತದೆ,ನಮ್ಮ ಕೈಯಲ್ಲಿ ಪಕ್ಕಾ ಪ್ಲಾನ್ ಇದ್ದು ನಾವು ಕಾರಿಡಾರ್ ಮಾಡಿಯೇ ಮಾಡುತ್ತೇವೆ ಎಂದೂ ಅಣ್ಣಾಮಲೈ ಹೇಳಿದ್ದಾರೆ. ‌

- Advertisement -

Latest News

error: Content is protected !!