Thursday, June 4, 2026
Homeಕರಾವಳಿಉಡುಪಿಉಡುಪಿ ನನ್ನ ಫೇವರಿಟ್ ಸ್ಥಳ; ಬಿಜೆಪಿ ಮಹಿಳಾ ಸಮಾವೇಶದಲ್ಲಿ ಸಂಸದೆ ಸುಮಲತಾ ಹೇಳಿಕೆ

ಉಡುಪಿ ನನ್ನ ಫೇವರಿಟ್ ಸ್ಥಳ; ಬಿಜೆಪಿ ಮಹಿಳಾ ಸಮಾವೇಶದಲ್ಲಿ ಸಂಸದೆ ಸುಮಲತಾ ಹೇಳಿಕೆ

- Advertisement -
- Advertisement -

ಉಡುಪಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಇಂದು ಬಿಜೆಪಿ ನಾರಿಶಕ್ತಿ ಸಮಾವೇಶ ನಡೆಯಿತು.

ಉಪ್ಪೂರಿ‌ನ ರಾಮ ಕ್ಷತ್ರೀಯ ಸಭಾಭವನದಲ್ಲಿ ನಡೆದ ಸಮಾವೇಶದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಭಾಗವಹಿಸಿದ್ದರು.

ಭಾಷಣದ ವೇಳೆ ತುಳುವಿನಲ್ಲಿ ಮಾತನಾಡಿದ ಸಂಸದೆ ಸುಮಲತಾ, ಉಡುಪಿ ನನ್ನ ಫೇವರಿಟ್ ಸ್ಥಳ, ಉಡುಪಿಗೆ ಬರುವಾಗ ಖುಷಿ ಆಗುತ್ತದೆ ಎಂದು ಹೇಳಿದ್ದಾರೆ.

ಕರಾವಳಿಯಲ್ಲಿ ವಿದ್ಯಾವಂತ, ಬುದ್ಧಿವಂತ, ತಿಳುವಳಿಕೆ ಇರುವವರು ಅಂತ ಅಂಬರೀಶ್ ಹೇಳುತ್ತಿದ್ದರು ಎಂದ ಸುಮಲತಾ, ಕೋಟ ಶ್ರೀನಿವಾಸ ಪೂಜಾರಿ ಅಂದ್ರೆ ಸಜ್ಜನ, ಸರಳ ವ್ಯಕ್ತಿ,ಮುಜರಾಯಿ ಸಚಿವರಾಗಿ ಎಲ್ಲಾ ದೇವಸ್ಥಾನಕ್ಕೆ ಅನುದಾನ ಕೊಟ್ಟವರು ಎಂದು ಹೇಳಿದ್ದಾರೆ.

ಈ ವೇಳೆ, ಕಾಂಗ್ರೆಸ್ ನಮ್ಮ ದುಡ್ಡನ್ನೇ ಗ್ಯಾರಂಟಿಯಾಗಿ ಕೊಡುತ್ತಿದ್ದು ರಾಜ್ಯದ ಬರಕ್ಕೆ ಪರಿಹಾರ ಕೊಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ಸಂಸದೆ ಸುಮಲತಾ ಟೀಕಿಸಿದ್ದಾರೆ.

- Advertisement -

Latest News

error: Content is protected !!