Monday, June 8, 2026
Homeಅಪರಾಧಸೌದೆ ಮಾಡುವ ವಿಚಾರದಲ್ಲಿ ಹೊಡೆದಾಟ; ಆಸ್ಪತ್ರೆಗೆ ದಾಖಲು

ಸೌದೆ ಮಾಡುವ ವಿಚಾರದಲ್ಲಿ ಹೊಡೆದಾಟ; ಆಸ್ಪತ್ರೆಗೆ ದಾಖಲು

- Advertisement -
- Advertisement -

ಸಿದ್ಧಾಪುರ: ಇಲ್ಲಿನ ಯಡಮೊಗೆಯಲ್ಲಿ ಅಕ್ಕ ಪಕ್ಕ ಮನೆಯವರ ನಡುವೆ ಸೌದೆ ಮಾಡುವ ವಿಚಾರದಲ್ಲಿ ಜಗಳ ನಡೆದಿದ್ದು, ಈ ಜಗಳ ಹೊಡೆದಾಟಕ್ಕೆ ತಿರುಗಿ ಗಾಯಗೊಂಡು ವ್ಯಕ್ತಿಗಳಿಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಯಡಮೊಗೆ ಮಂಜು (64) ಹಾಗೂ ಪಕ್ಕದ ಮನೆಯ ರತ್ನಾಕರ ಅವರ ನಡುವೆ ಜಾಗದ ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ಸೌದೆ ಹಾಗೂ ತೆಂಗಿನ ಕಾಯಿ ಕೊಯ್ಯುವ ವಿಚಾರವಾಗಿ ಅವರಿಬ್ಬರ ನಡುವೆ ಗಲಾಟೆ ನಡೆಯಿತು.

ಈ ಸಂಬಂಧ ಮಂಜು ಮತ್ತು ರತ್ನಾಕರ ಅವರು ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!