Saturday, June 6, 2026
Homeಕರಾವಳಿಮಂಗಳೂರು: ಏಪ್ರಿಲ್ 14 ರಂದು ಮೋದಿ ಸಮಾವೇಶ ರದ್ದು; ಪ್ರಧಾನಿ ರೋಡ್ ಶೋಗೆ ಅವಕಾಶ

ಮಂಗಳೂರು: ಏಪ್ರಿಲ್ 14 ರಂದು ಮೋದಿ ಸಮಾವೇಶ ರದ್ದು; ಪ್ರಧಾನಿ ರೋಡ್ ಶೋಗೆ ಅವಕಾಶ

- Advertisement -
- Advertisement -

ಮಂಗಳೂರು: ಏಪ್ರಿಲ್ 14 ರಂದು ಮಂಗಳೂರಿನಲ್ಲಿ‌ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ‌ ಸಮಾವೇಶವನ್ನು ರದ್ದುಗೊಳಿಸಲಾಗಿದ್ದು ಅದರ ಬದಲಿಗೆ ಅದೇ ದಿನ ನಗರದಲ್ಲಿ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ ಎಂದು ಹೇಳಲಾಗಿದೆ

ಕರಾವಳಿ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸುವ ನಿಟ್ಟಿನಲ್ಲಿ ಮುಂಬರುವ ಎಪ್ರಿಲ್ 14 ರಂದು ಮಂಗಳೂರಿನಲ್ಲಿ ಸಮಾವೇಶ ನಡೆಸಲು ತಯಾರಿ ನಡೆಸಲಾಗಿತ್ತು ಆದರೆ ಬಿಗುವಿನ ವೇಳಾಪಟ್ಟಿ ಹಾಗೂ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಸಮಾವೇಶ ಬದಲು ರೋಡ್ ಶೋ‌ ನಡೆಸಲು ಪಕ್ಷ ನಿರ್ಧರಿಸಿದೆ ಎಂದು ಹೇಳಲಾಗಿದ್ದು ಅದರಂತೆ ಮಂಗಳೂರಿನ ನಾರಾಯಣ ಗುರು‌ ವೃತ್ತದಿಂದ ನವಭಾರತ ವೃತ್ತ ವರೆಗೆ ರೋಡ್ ಶೋ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!