Sunday, June 7, 2026
Homeಕರಾವಳಿಸುಳ್ಯದ ಯುವಕನಿಗೆ ದುಬೈನಲ್ಲಿ ಹೊಡೆಯಿತು 10 ಲಕ್ಷ ಬಂಪರ್ ಲಾಟರಿ

ಸುಳ್ಯದ ಯುವಕನಿಗೆ ದುಬೈನಲ್ಲಿ ಹೊಡೆಯಿತು 10 ಲಕ್ಷ ಬಂಪರ್ ಲಾಟರಿ

- Advertisement -
- Advertisement -

ಸುಳ್ಯ : ದುಬೈನಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಳ್ಯದ ಜಟ್ಟಿಪಳ್ಳ ನಿವಾಸಿ ಮಹಮ್ಮದ್ ರಫೀಕ್ ಅವರು ದುಬೈನಲ್ಲಿ ಲಾಟರಿಯಲ್ಲಿ ಬರೋಬ್ಬರಿ 10 ಲಕ್ಷ ಗೆದ್ದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿ ಕೆಲಸ ನಿರ್ವಹಿಸುತ್ತಿರುವ ಅವರು ದುಬೈನಲ್ಲಿ ಆನ್ ಲೈನ್ ಮೂಲಕ ಲಾಟರಿ ಟಿಕೆಟ್ ಖರೀಸಿದ್ದರು.ಅದರಲ್ಲಿ ಅವರಿಗೆ 10 ಲಕ್ಷ ರೂಪಾಯಿ ಲಭಿಸಿದೆ.

ಇನ್ನು ಕಳೆದ ವರ್ಷ ಜಟ್ಟಿಪಳ್ಳದ ನಿವಾಸಿಯಾಗಿರುವ ಮುಂಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಫಯಾಜ್ ಅವರು ಇದೇ ರೀತಿ ಆನ್ ಲೈನ್ ನಲ್ಲಿ ದುಬೈ ಲಾಟರಿ ಖರೀದಿಸಿ ಭರ್ಜರಿ ಬಹುಮಾನ ಗೆದಿದ್ದರು. ಬರೋಬ್ಬರಿ 23 ಕೋಟಿ ರೂಪಾಯಿ ಲಾಟರಿ ಅವರಿಗೆ ಒಲಿದಿತ್ತು. ಇದೀಗ ಮತ್ತೊಮ್ಮೆ ಜಟ್ಟಿಪಳ್ಳದ ಯುವಕನಿಗೇ ಲಾಟರಿ ಹೊಡೆದಿರೋದು ಅಚ್ಚರಿ ಮೂಡಿಸಿದೆ.

- Advertisement -

Latest News

error: Content is protected !!