Thursday, June 4, 2026
Homeತಾಜಾ ಸುದ್ದಿಲಿಫ್ಟ್ ನಲ್ಲಿ ಲಾಕ್ ಆಗಿ ಪರದಾಡಿದ ಗೋವಾ ಸಿಎಂ, ಯದುವೀರ್ ಒಡೆಯರ್ ಹಾಗೂ ಹಲವು ಗಣ್ಯರು

ಲಿಫ್ಟ್ ನಲ್ಲಿ ಲಾಕ್ ಆಗಿ ಪರದಾಡಿದ ಗೋವಾ ಸಿಎಂ, ಯದುವೀರ್ ಒಡೆಯರ್ ಹಾಗೂ ಹಲವು ಗಣ್ಯರು

- Advertisement -
- Advertisement -

ಮಂಡ್ಯ : ಲಿಫ್ಟ್ ನಲ್ಲಿ ಲಾಕ್ ಆಗಿ ಗೋವಾ ಸಿಎಂ ಪ್ರಮೋದ್ ಸಾವಂತ್ , ಯದುವೀರ್ ಒಡೆಯರ್, ಮಾಜಿ ಸಚಿವ ಪುಟ್ಟರಾಜು ಸೇರಿದಂತೆ ಹಲವು ಗಣ್ಯರು ಪರದಾಡಿದ ಘಟನೆ ಮಂಡ್ಯ ನಗರದ ಅಮರಾವತಿ ಹೋಟೆಲ್ ನಲ್ಲಿ ನಡೆದಿದೆ.

ಮಂಡ್ಯ ಲೋಕಸಭೆ ಚುನಾವಣಾ ಹಿನ್ನೆಲೆಯಲ್ಲಿ ಮಂಡ್ಯ ನಗರಕ್ಕೆ ಆಗಮಿಸಿದ್ದ ಗೋವಾ ಸಿ.ಎಂ, ಯದುವೀರ್ ,ಮಾಜಿ ಸಚಿವ ಪುಟ್ಟರಾಜು ಸೇರಿ ಹಲವು ಗಣ್ಯರು ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದಾರೆ.ಸ್ಥಳದಲ್ಲಿ ಕೆಲ ಕಾಲ ಗೊಂದಲ, ಆತಂಕದ ವಾತಾವರಣ‌ ನಿರ್ಮಾಣವಾಗಿತ್ತು.

ಸುದ್ದಿಗೋಷ್ಟಿ ಮುಗಿಸಿ ವಾಪಸ್ಸಾಗುವ ವೇಳೆ ಘಟನೆ‌ ನಡೆದಿದ್ದು, ಸುದ್ದಿಗೋಷ್ಟಿ ಮುಗಿಸಿ ಹೊರ ಹೋಗುವಾಗ ಹೆಚ್ಚು ಜನರು ಲಿಪ್ಟ್ ಗೆ ಹತ್ತಿದ್ದರಿಂದ ಅರ್ಧಕ್ಕೆ ಬಂದು ಲಿಫ್ಟ್ ಕೈಕೊಟ್ಟಿದೆ. ಕೂಡಲೇ ಹೋಟೆಲ್ ನ ತಾಂತ್ರಿಕ ಸಿಬ್ಬಂದಿ ಬಂದು ಲಿಫ್ಟ್ ಬಾಗಿಲು ದುರಸ್ಥಿ ಮಾಡಿದ್ದಾರೆ.

- Advertisement -

Latest News

error: Content is protected !!