Friday, May 3, 2024
Homeಕರಾವಳಿಬಜರಂಗದಳವನ್ನು ಗಡಿಪಾರಿನ ಮೂಲಕ ಮಟ್ಟ ಹಾಕುತ್ತೇವೆ ಎಂಬುದು ಭ್ರಮೆ: ಪುನೀತ್ ಅತ್ತಾವರ

ಬಜರಂಗದಳವನ್ನು ಗಡಿಪಾರಿನ ಮೂಲಕ ಮಟ್ಟ ಹಾಕುತ್ತೇವೆ ಎಂಬುದು ಭ್ರಮೆ: ಪುನೀತ್ ಅತ್ತಾವರ

spot_img
- Advertisement -
- Advertisement -

ಮಂಗಳೂರು: ಬಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದು, ಗಡಿಪಾರಿನ ಮೂಲಕ ಬಜರಂಗದಳ ಮಟ್ಟ ಹಾಕ್ತೇವೆನ್ನುವುದು ಸರಕಾರದ ಭ್ರಮೆ ಎಂದು ತಿಳಿಸಿದ್ದಾರೆ.

ಅವರು ಮಂಗಳೂರಿನಲ್ಲಿ ಮಾತನಾಡಿ, “ಹಲವಾರು ವರ್ಷಗಳಿಂದ ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕರಾದ ಭರತ್ ಕುಮುಡೇಲ್ ಸಂಘಟನೆಯಲ್ಲಿ ತೊಡಗಿಸಿಕೊಂಡು ಧರ್ಮರಕ್ಷಣೆಯ, ಗೋಸಂರಕ್ಷಣೆ, ಮಾತೆಯರ ರಕ್ಷಣೆ ಅಲ್ಲದೆ ಮಾಧಕ ದೃವ್ಯ, ಡ್ರಗ್ಸ್ ವಿರುದ್ಧ ಕೆಲಸ ಮಾಡುತ್ತಿದ್ದು, ರಾಜಕೀಯ ದ್ವೇಷದಿಂದ ಚುನಾವಣೆಯ ಸಂಧರ್ಭದಲ್ಲಿ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದಂತೆ ಕಾಂಗ್ರೆಸ್ ಸರಕಾರ ಷಡ್ಯಂತ್ರ ರೂಪಿಸಿ ಭರತ್ ಕುಮುಡೇಲ್ ರವರ ಮೇಲೆ ಗಡಿಪಾರು ನೋಟೀಸು ನೀಡಿದೆ. ಇಂತಹ ಹಿಂದೂ ವಿರೋಧಿ ನೀತಿಯನ್ನು ಅನ್ವಯಿಸಿರುವ ರಾಜ್ಯಸರ್ಕಾರವನ್ನು ಬಲವಾಗಿ ಖಂಡಿಸುತ್ತವೆ,” ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರ ಈ ರೀತಿ ಗಡಿಪಾರು ಮಾಡುವ ಮೂಲಕ ಬಜರಂಗದಳ ಕಾರ್ಯಕರ್ತರನ್ನು ಧಮನಿಸುತ್ತೇವೆ ಎಂದುಕೊಂಡಿದ್ದರೆ ಅದು ಭ್ರಮೆ ನಿಮ್ಮ ಯಾವುದೇ ದ್ವೇಷ ರಾಜಕಾರಣದ ಅಸ್ತ್ರಕ್ಕೆ ಬಜರಂಗದಳ ಕಾರ್ಯಕರ್ತರು ಹೆದರುವುದಿಲ್ಲ, ಧರ್ಮದ, ರಾಷ್ಟ್ರದ ಕೆಲಸಕ್ಕೆ ಬಜರಂಗದಳ ಕಾರ್ಯಕರ್ತರು ಯಾವಾಗಲು ಕಟಿಬದ್ಧ ಹಾಗಾಗಿ ಈ ಗಡಿಪಾರು ನೋಟೀಸನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

- Advertisement -
spot_img

Latest News

error: Content is protected !!