Saturday, June 6, 2026
Homeಕರಾವಳಿಬೆಳ್ತಂಗಡಿ: 10 ಕ್ಕೂ ಹೆಚ್ಚು ಶ್ವಾನಗಳನ್ನು ವಿಷ ಹಾಕಿ ಕೊಂದ ಪಾಪಿಗಳು

ಬೆಳ್ತಂಗಡಿ: 10 ಕ್ಕೂ ಹೆಚ್ಚು ಶ್ವಾನಗಳನ್ನು ವಿಷ ಹಾಕಿ ಕೊಂದ ಪಾಪಿಗಳು

- Advertisement -
- Advertisement -

ಬೆಳ್ತಂಗಡಿ: ಪಾಪಿಗಳು 10 ಕ್ಕೂ ಹೆಚ್ಚು ಶ್ವಾನಗಳನ್ನು ವಿಷ ಹಾಕಿ ಕೊಂದ ಘಟನೆ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ಎಂಬಲ್ಲಿ ನಡೆದಿದೆ.


ಶನಿವಾರ ರಾತ್ರಿ ಈ ರಸ್ತೆಯುದ್ದಕ್ಕೂ ಯಾರೋ ಯಾವುದು ಆಹಾರದಲ್ಲಿ ವಿಷವನ್ನು ಬೆರೆಸಿ ಅಲ್ಲಲ್ಲಿ ಎಸೆದು ಹೋಗಿದ್ದಾರೆ. ಅವುಗಳನ್ನು ತಿಂದಿರುವ ನಾಯಿಗಳು ಅಲ್ಲಲ್ಲಿ ಸತ್ತು ಬಿದ್ದಿವೆ. ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದ ಜನರು ಇದನ್ನು ಗಮನಿಸಿ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಅವರ ಗಮನಕ್ಕೆ ತಂದಿದ್ದಾರೆ. ಪರಿಶೀಲನೆ ನಡೆಸಿದಾಗ ಕೆಲವು ಮನೆಗಳ ಅಂಗಳದಲ್ಲೂ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ.

ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!