Thursday, June 4, 2026
Homeಕರಾವಳಿಸುಬ್ರಹ್ಮಣ್ಯ: ಪಂಜದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಕದ್ದ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಸುಬ್ರಹ್ಮಣ್ಯ: ಪಂಜದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಕದ್ದ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಸುಬ್ರಹ್ಮಣ್ಯ: ಪಂಜದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಕದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸುವಲ್ಲಿ ಸುಬ್ರಮಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾ.4 ರಂದು ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬಲ್ ಕಟ್ಟೆ ಸೀತಮ್ಮ ಎಂಬವರು ಮನೆಗೆ ಬಾಗಿಲು ಹಾಕಿ ಪಕ್ಕದ ಮನೆಗೆ ಹೋಗಿದ್ದರು. ಇದೇ ವೇಳೆ ಆಕೆಯ ಮನೆಯೊಳಗೆ ಸದ್ದು ಕೇಳಿತ್ತೆಂದು ಮನೆಗೆ ಹಿಂದಿರುಗಿ ಬಂದಾಗ ಇಬ್ಬರು ಕಳ್ಳರು ಮನೆಯೊಳಗೆ ಹಿಂದಿನ ಬಾಗಿಲಿನಿಂದ ಮನೆಯೊಳಗೆ ನುಗ್ಗಿದ್ದರು.ಇದೇ ವೇಳೆ ಅಪರಿಚಿತರು ಜೀವ ಬೆದರಿಕೆ ಒಡ್ಡಿ ಸೀತಮ್ಮ ಅವರನ್ನು ತಳ್ಳಿ ಹಾಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಿತ್ತು ಬೈಕಿನಲ್ಲಿ ಪರಾರಿಯಾಗಿದ್ದರು.

ಇದೀಗ ಪೊಲೀಸರು ಕಳ್ಳತನ ಮಾಡಿರುವ ಚಿತ್ರದುರ್ಗ ಹಾಗೂ ಬೇಲೂರು ಮೂಲದ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!