Thursday, June 4, 2026
Homeಕರಾವಳಿಮಂಗಳೂರು; 1 ವರ್ಷದ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಂಗಳೂರು; 1 ವರ್ಷದ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

- Advertisement -
- Advertisement -

ಮಂಗಳೂರು; 1 ವರ್ಷದ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರೇಕಳ- ಪಾವೂರು ಕಡವಿನ ಬಳಿ ನಡೆದಿದೆ.ಅಡ್ಯಾರ್ ಪದವು ಸಮೀಪದ ಚೈತ್ರಾ(30) ಒಂದು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚೈತ್ರಾ ಒಂದು ವರ್ಷ ತನ್ನ ಹೆಣ್ಣು ಮಗುವನ್ನು ಸೊಂಟಕ್ಕೆ ಕಟ್ಟಿ ನದಿಗೆ ಹಾರಿ ನಿನ್ನೆ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೈತ್ರಾ ಶುಕ್ರವಾರ ಮಧ್ಯಾಹ್ನದ ಬಳಿಕ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ‌. ಶುಕ್ರವಾರ ಸಂಜೆ ಈಕೆ ರಿಕ್ಷಾವೊಂದರಲ್ಲಿ ಅಡ್ಯಾರ್-ಹರೇಕಳ ಸೇತುವೆ ದಾಟಿ ಹರೇಕಳ-ಪಾವೂರು ಕಡವಿನ ಬಳಿ ಜಂಕ್ಷನ್‌ನಲ್ಲಿ ಇಳಿದಿದ್ದರು ಎನ್ನಲಾಗಿದೆ. ನಂತರ‌ ಈಕೆ ನದಿ ತೀರದ ಕಾಲುದಾರಿಯಾಗಿ ಪಾವೂರು ಗಾಡಿಗದ್ದೆ ಕಡೆ ನಡೆದುಕೊಂಡು ಹೋಗಿರುವುದನ್ನು ಸ್ಥಳೀಯರು ನೋಡಿದ್ದರು.

ಚೈತ್ರಾ ತನ್ನ ಮಗುವಿನೊಂದಿಗೆ ಕಾಣೆಯಾದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಎಲ್ಲರೂ ಹುಡುಕಾಟ ನಡೆಸಿದ್ದರು. ‌ ಈ ಮಧ್ಯೆ ಚೈತ್ರಾ ಅವರ ಮೃತದೇಹ ಹರೇಕಳ ಪಾವೂರು ನದಿ ತೀರದಲ್ಲಿ ಪತ್ತೆಯಾಗಿದೆ. ಚೈತ್ರಾ ಅವರ ಸೊಂಟಕ್ಕೆ ಮಗುವನ್ನು ಕಟ್ಟಿಕೊಂಡಿದ್ದರು.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.‌ ಮೃತದೇಹವನ್ನು ವೆನ್ಲಾಕ್ ಶವಗಾರದಲ್ಲಿಡಲಾಗಿದ್ದು, ಪ್ರಕರಣ ದಾಖಲಿಸಿ ಕೊಂಡಿರುವ ಕೊಣಾಜೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

- Advertisement -

Latest News

error: Content is protected !!