Thursday, June 4, 2026
Homeಕರಾವಳಿಉಡುಪಿಉಡುಪಿ; ಮನೆಯೊಂದರಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಉಡುಪಿ; ಮನೆಯೊಂದರಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

- Advertisement -
- Advertisement -

ಉಡುಪಿ; ಮನೆಯೊಂದರಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 80,000 ರೂ.ನಗದು ಕಳವು ಮಾಡಿರುವ ಘಟನೆ ಬಡಗುಬೆಟ್ಟ ಗ್ರಾಮದಲ್ಲಿ ನಡೆದಿದೆ.

ಬಡಗುಬೆಟ್ಟ ಗ್ರಾಮದ ಮನೆಯೊಂದಕ್ಕೆ ಇಂದು ಬೆಳಗಿನ ಜಾವ ನುಗ್ಗಿದ ಕಳ್ಳರು ಮನೆಯ ಟೀಪಾಯಿ ಮೇಲೆ ಇಟ್ಟಿದ್ದ ವಜ್ರದ ನೆಕ್ಲೇಸ್ ಸೇರಿದಂತೆ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 80,000 ರೂ.ನಗದು ಕದ್ದಿದ್ದಾರೆ ಎಂದು ಸುತಲ ಬಿ.ಎಂಬವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಮುಂಜಾನೆ 3:30ರಿಂದ 4:15ರ ನಡುವಿನ ಅವಧಿಯಲ್ಲಿ ಈ ಕಳತನ ನಡೆದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಾವಿಯ ಬಳಿಯ ಬಾಗಿಲನ್ನು ತೆರೆದು ಅಡುಗೆ ಕೋಣೆಯ ಮಧ್ಯದ ಕಿಟಕಿಯನ್ನು ಮುರಿದು ಮನೆಯೊಳಗೆ ಬಂದ ಕಳ್ಳರು ಟೀಪಾಯ್ ಮೇಲೆ ಇಟ್ಟಿದ್ದ ಅಂದಾಜು 8 ಲಕ್ಷ ರೂ.ಮೌಲ್ಯದ ವಜ್ರದ ನೆಕ್ಲೇಸ್, 8ಲಕ್ಷ ರೂ.ಮೌಲ್ಯದ ಎರಡು ವಜ್ರದ ಬಳೆ, 2 ಲಕ್ಷ ರೂ.ಮೌಲ್ಯದ ಎರಡು ಜೊತೆ ವಜ್ರದ ಬೆಂಡೋಲೆಯೊಂದಿಗೆ 80 ಸಾವಿರ ರೂ.ನಗದನ್ನು ಅವರು ಕದ್ದೊಯ್ದಿದ್ದಾರೆ ಎಂದು ಅವರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!