- Advertisement -
![]()
- Advertisement -
ಕಡಬ: ಜೆಸಿಬಿಯಿಂದ ಮನೆಯ ಕೌಂಪೌಂಡ್ ಕೆಡವಿ, ಮಹಿಳೆ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಕಡಬ ಕೊಂಬಾರು ಎಂಬಲ್ಲಿ ನಡೆದಿದೆ. ಈ ಬಗ್ಗೆ ಗಂಗಮ್ಮ(72) ಎಂಬವರು ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾ.10ರಂದು ಗಂಗಮ್ಮ ಅವರ ನೆರೆಕೆರೆಯ ಸಂಬಂಧಿಯೂ ಆಗಿರುವ ಶಶಿಧರ ಎಂಬವರು ಜೆಸಿಬಿ ಯಂತ್ರದ ಮೂಲಕ ಮನೆಯ ಆವರಣಗೋಡೆಯನ್ನು ಕೆಡವಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅವರು ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದಾರೆ ಎಂದು ಗಾಯಗೊಂಡ ಗಂಗಮ್ಮ ತಿಳಿಸಿದ್ದಾರೆ.
ಇನ್ನು ಗಂಗಮ್ಮ ಅವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
- Advertisement -


