Friday, May 3, 2024
Homeಕರಾವಳಿಉಪ್ಪಿನಂಗಡಿ; ವೃದ್ಧ ವ್ಯಾಪಾರಿಯಲ್ಲಿ ಹಣ್ಣು ಖರೀದಿಸುವ ನೆಪದಲ್ಲಿ ಹಣ ಹಾಗೂ ಮೊಬೈಲ್ ಎಗರಿಸಿದ ಖದೀಮ

ಉಪ್ಪಿನಂಗಡಿ; ವೃದ್ಧ ವ್ಯಾಪಾರಿಯಲ್ಲಿ ಹಣ್ಣು ಖರೀದಿಸುವ ನೆಪದಲ್ಲಿ ಹಣ ಹಾಗೂ ಮೊಬೈಲ್ ಎಗರಿಸಿದ ಖದೀಮ

spot_img
- Advertisement -
- Advertisement -

ಉಪ್ಪಿನಂಗಡಿ; ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೊಬ್ಬ ವೃದ್ಧ ವ್ಯಾಪಾರಿಯಲ್ಲಿ ಹಣ್ಣು ಖರೀದಿಸುವ ನೆಪದಲ್ಲಿ ಹಣ ಹಾಗೂ ಮೊಬೈಲ್ ಎಗರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿನ ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿರುವ ಫಕ್ರುದ್ದೀನ್ (75) ಎಂಬ ವೃದ್ಧ ವ್ಯಾಪಾರಿಯ ಅಂಗಡಿಗೆ ಬಂದ  ವ್ಯಕ್ತಿಯೊಬ್ಬ 8 ಕೆ.ಜಿ. ಮಾಗಿದ ರಸಬಾಳೆ ಹಣ್ಣು ಹಾಗೂ 4 ಕೆ.ಜಿ. ಟೋಮೇಟೋ ಬೇಕೆಂದು ತಿಳಿಸಿ, ಮೊಬೈಲ್ ಬಿಟ್ಟು ಬಂದಿದ್ದೇನೆ. ಇನ್ನಷ್ಟು ತರಕಾರಿ ಬೇಕೆಂದು ಮನೆಯಲ್ಲಿ ತಿಳಿಸಿದ್ದಾರೆ. ಫೋನ್ ಮಾಡಿ ವಿಚಾರಿಸುವುದಕ್ಕಾಗಿ ಒಮ್ಮೆ ಪೋನ್ ಕೊಡಿ ಎಂದು ವ್ಯಾಪಾರಿಯ ಮೊಬೈಲ್ ಪೋನ್ ಪಡೆದುಕೊಂಡಿದ್ದಾನೆ., ಫೋನ್ ಮಾಡುವಂತೆ ನಟನೆ ಮಾಡಿ 1000 ರೂಪಾಯಿ ಕೊಡಿ ಎಂದ ಅವರಲ್ಲಿ ಕೇಳಿದ್ಜಾನೆ. ಆಗ ವ್ಯಾಪಾರಿಯು ಅಷ್ಟು ಹಣ ನನ್ನಲ್ಲಿ ಇಲ್ಲ ಎಂದಾಗ ವ್ಯಾಪಾರಿಯ ಬಳಿ ಇದ್ದ 500 ರೂಪಾಯಿ ಪಡೆದುಕೊಂಡು ಮೊಬೈಲ್ ಪೋನ್ ನೊಂದಿಗೆ ಈಗ ಬರುವೆನೆಂದು ತಿಳಿಸಿ ಹೋದಾತ ಬಳಿಕ ನಾಪತ್ತೆಯಾಗಿದ್ದಾನೆ.

ಬಾಳೆಹಣ್ಣು ಮತ್ತು ಟೋಮೆಟೋವನ್ನು ಕಟ್ಟಿ ಗ್ರಾಹಕನನ್ನು ಕಾಯುತ್ತಿದ್ದ ಫಕ್ರುದ್ಧೀನ್ ರವರಿಗೆ ಎಷ್ಟು ಹೊತ್ತಾದರೂ ಆತ ಬಾರದೇ ಇದ್ದಾಗ ತಾನು ಮೋಸ ಹೋಗಿರುವ ವಿಚಾರ ತಿಳಿದು ಕಂಗಾಲಾಗಿದ್ದಾರೆ. ವಂಚಕನು ತನ್ನ ಮೊಬೈಲ್ ನಿಂದ ಕರೆ ಮಾಡಿದ್ದು ನಿಜವಾಗಿದ್ದರೆ ಅದರ ಸಹಾಯದಿಂದ ವಂಚಕನನ್ನು ಪತ್ತೆ ಹಚ್ಚಿ ಹಣ ಮತ್ತು ಮೊಬೈಲ್ ನ್ನು ಹಿಂದುರುಗಿಸಿ ಕೊಡಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಫಕ್ರುದ್ದೀನ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!