Sunday, June 7, 2026
Homeಚಿಕ್ಕಮಗಳೂರುಚಾರ್ಮಾಡಿ ಘಾಟ್ ನಲ್ಲಿ KSRTC ಬಸ್ ಬ್ರೇಕ್ ಫೇಲ್; ಚಾಲಕ 70 ಕ್ಕೂ ಹೆಚ್ಚು ಪ್ರಯಾಣಿಕರ...

ಚಾರ್ಮಾಡಿ ಘಾಟ್ ನಲ್ಲಿ KSRTC ಬಸ್ ಬ್ರೇಕ್ ಫೇಲ್; ಚಾಲಕ 70 ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ್ದೇ ರೋಚಕ

- Advertisement -
- Advertisement -

ಚಾರ್ಮಾಡಿ ;  KSRTC ಬಸ್ ಬ್ರೇಕ್ ಫೇಲ್ ಆಗಿ ಚಾಲಕನ ಸಮಯಪ್ರಜ್ಞೆ ಯಿಂದ  70 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.

ಕಡೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ KSRTC ಬಸ್ ಚಾರ್ಮಾಡಿ‌ ಘಾಟ್ ನಲ್ಲಿ ಬ್ರೇಕ್ ಫೇಲ್ ಆಗಿ ಕಂಟ್ರೋಲ್‌  ತಪ್ಪಿದೆ. ಸುಮಾರು 2 ನಿಮಿಷ ಬ್ರೇಕ್ ಇಲ್ಲದೇ ಬಸ್ ಸಂಚರಿಸಿದೆ.
ಆ ಬಳಿಕ ಬಸ್ಸನ್ನ ಡಿವೈಡರ್ ಗೆ ಡಿಕ್ಕಿ ಹೊಡೆಸಿ ಚಾಲಕ ಸಂತೋಷ್ ಸಮಯ ಪ್ರಜ್ಞೆ ಮೆರೆದಿದ್ದಾರೆ. ಇನ್ನು ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆಯುತ್ತಿದ್ದಂತೆ  ದಟ್ಟ ಹೊಗೆ ಆವರಿಸಿದೆ.

ಸ್ವಲ್ಪ ಯಡವಟ್ಟಾಗಿದ್ರೂ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ‌ ಚಾಲಕ ಸಂತೋಷ್ ಸಮಯಪ್ರಜ್ಞೆ ಪ್ರಯಾಣಿಕರ ಜೀವ ಉಳಿಸಿದೆ.

- Advertisement -

Latest News

error: Content is protected !!