Saturday, August 29, 2026
Homeತಾಜಾ ಸುದ್ದಿಪುಟ್ಟ ಮಕ್ಕಳ ಪೋಷಕರೇ ಮಿಸ್ ತಪ್ಪದೇ ಈ ಸುದ್ದಿ ಓದಿ; ಚಾಕಲೇಟ್ ಎಂದು ಮನೆಯಲ್ಲಿಟ್ಟ ಮಾತ್ರೆ...

ಪುಟ್ಟ ಮಕ್ಕಳ ಪೋಷಕರೇ ಮಿಸ್ ತಪ್ಪದೇ ಈ ಸುದ್ದಿ ಓದಿ; ಚಾಕಲೇಟ್ ಎಂದು ಮನೆಯಲ್ಲಿಟ್ಟ ಮಾತ್ರೆ ತಿಂದು ಮಗು ಸಾವು

- Advertisement -
- Advertisement -

ಚಿತ್ರದುರ್ಗ: ಪುಟ್ಟ ಮಕ್ಕಳ ಪೋಷಕರೇ ಮಿಸ್ ಮಾಡದೇ ನೀವು ಈ ಸುದ್ದಿ ಓದಿ. ಪುಟ್ಟ ಮಕ್ಕಳು ಮನೆಯಲ್ಲಿದ್ದಾಗ ನಮಗೆ ಸಾವಿರ ಕಣ್ಣುಗಳಿದ್ದರೂ ಕಮ್ಮಿನೇ. ಅವರ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲೇ ಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ಎಂತಹ ಅನಾಹುತಗಳು ಆಗುತ್ತವೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ,

ಮನೆಯಲ್ಲಿ ಇರಿಸಿದ್ದ ಮಾತ್ರೆ ತಿಂದು 5 ವರ್ಷದ ಕಂದಮ್ಮವೊಂದು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.ಇಲ್ಲಿನ ಪವಿತ್ರಾ ಎಂಬುವರಿಗೆ ಹುಷಾರ್ ಇಲ್ಲದ ಕಾರಣ ವೈದ್ಯರ ಬಳಿ ತೆರಳಿ ತೋರಿಸಿಕೊಂಡು ಬಂದಿದ್ದರು. ವೈದ್ಯರು ನೀಡಿದ ಮಾತ್ರೆಗಳನ್ನು ಮನೆಯಲ್ಲಿ ಇರಿಸಿದ್ದರು. ಹೀಗೆ ಇರಿಸಿದ್ದಂತ ಮಾತ್ರೆಗಳನ್ನೇ ಅವರ 5 ವರ್ಷದ ಮಗು ಋತ್ವಿಕ್ ಚಾಕೋಲೇಟ್ ಎಂದು ತಿಂದು ಅಸ್ವಸ್ಥಗೊಂಡಿದೆ.

ಮಗ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ಗಮನಿಸಿದ ವಸಂತ್ ಹಾಗೂ ಪವಿತ್ರಾ ದಂಪತಿ ಕೂಡಲೇ ಚಿತ್ರದುರ್ಗ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದ್ರೇ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ವೈದ್ಯರ ಸೂಚನೆಯ ಮೇರೆಗೆ ಮಗುವನ್ನು ಬೆಂಗಳೂರಿಗೆ ಕೊಂಡೊಯ್ದಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಮಾತ್ರೆಯನ್ನು ಚಾಕೋಲೇಟ್ ಎಂದು ತಿಂದು ಚಿಕಿತ್ಸೆ ಪಡೆಯುತ್ತಿದ್ದಂತ 5 ವರ್ಷದ ಋತ್ವಿಕ್ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಈ ಸಂಬಂಧ ಚಿತ್ರದುರ್ಗದ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!