Saturday, June 6, 2026
Homeಕರಾವಳಿಮಂಗಳೂರು; ಹೃದಯಾಘಾತದಿಂದ ಪತ್ನಿ ನಿಧನ; ಸುದ್ದಿ ತಿಳಿದು ಪತಿ ಆತ್ಮಹತ್ಯೆ

ಮಂಗಳೂರು; ಹೃದಯಾಘಾತದಿಂದ ಪತ್ನಿ ನಿಧನ; ಸುದ್ದಿ ತಿಳಿದು ಪತಿ ಆತ್ಮಹತ್ಯೆ

- Advertisement -
- Advertisement -

ಮಂಗಳೂರು; ಹೃದಯಾಘಾತದಿಂದ ಪತ್ನಿ ನಿಧನವಾದ ಸುದ್ದಿ ತಿಳಿದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಣಾಜೆಯ ಗ್ರಾಮಚಾವಡಿ ಎಂಬಲ್ಲಿ ನಡೆದಿದೆ.ಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ(59) ಮತ್ತು ಅವರ ಪತಿ ಶೇಷಪ್ಪ ಪೂಜಾರಿ(63) ಮೃತ ದುರ್ದೈವಿಗಳು.


ಮೀನಾಕ್ಷಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೀನಾಕ್ಷಿ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಮರುದಿನ ಸಂಜೆ ಶೇಷಪ್ಪ ಆವರು ಮನೆಗೆ ಆಗಮಿಸಿದ್ದ ಸಂದರ್ಭ ಮೀನಾಕ್ಷಿ ಅವರ ಸಾವಿನ ಸುದ್ಧಿಯನ್ನು ಸಂಬಂಧಿಕರೊಬ್ಬರು ತಿಳಿಸಿದ್ದರು. ಸಂಬಂಧಿಕರು ಪಕ್ಕದ ಅಂಗಡಿಗೆ ತೆರಳಿ ವಾಪಾಸಾದಾಗ ಶೇಷಪ್ಪ ಅವರು ಕೀಟನಾಶಕವನ್ನು ಕುಡಿದಿದ್ದಾರೆ. ಪಕ್ಕದ ಅಂಗಡಿಯವರು ಮತ್ತು ಸಂಬಂಧಿಕರು ಕೀಟನಾಶಕವನ್ನು ಎಳೆದು ತೆಗೆದರೂ ಅದಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


ಮೀನಾಕ್ಷಿ ತನ್ನ ಪತಿ ಶೇಷಪ್ಪಪೂಜಾರಿ ಮತ್ತು ಮೀನಾಕ್ಷಿಯ ಸಹೋದರಿ ಮತ್ತು ಅವರ ಪತಿಯೂ ಒಂದೇ ಮನೆಯಲ್ಲಿ ವಾಸವಾಗಿದ್ದು, ಮಕ್ಕಳಿಲ್ಲದ ಕೊರಗು ಮತ್ತು ಅನಾರೋಗ್ಯದಿಂದ ಬೇಸತ್ತು ಪತ್ನಿ ಸಾವಿನ ಕೆಲವೇ ಗಂಟೆಯಲ್ಲಿ ತಾವೂ ಕೂಡ ಸಾವಿಗೆ ಶರಣಾಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!