Thursday, June 4, 2026
Homeಕರಾವಳಿಉಡುಪಿಉಡುಪಿ: ಸ್ಕೂಟರ್ ನಿಲ್ಲಿಸಿ ನಿದ್ರೆಗೆ ಜಾರಿದ ಸವಾರ; ಆತನನ್ನು ಕೆಳಗೆ ಮಲಗಿಸಿ ಸ್ಕೂಟರ್ ಕದ್ದ ಕಿಲಾಡಿ...

ಉಡುಪಿ: ಸ್ಕೂಟರ್ ನಿಲ್ಲಿಸಿ ನಿದ್ರೆಗೆ ಜಾರಿದ ಸವಾರ; ಆತನನ್ನು ಕೆಳಗೆ ಮಲಗಿಸಿ ಸ್ಕೂಟರ್ ಕದ್ದ ಕಿಲಾಡಿ ಕಳ್ಳರು

- Advertisement -
- Advertisement -

ಉಡುಪಿ: ಸ್ಕೂಟರ್ ನಿಲ್ಲಿಸಿ ನಿದ್ರೆಗೆ ಜಾರಿದ ಸವಾರನನ್ನು ಮೆಲ್ಲಗೆ ಸ್ಕೂಟರ್ ನಿಂದ ಕೆಳಗೆ ಮಲಗಿಸಿ ಕಿಲಾಡಿ ಕಳ್ಳರು ಸ್ಕೂಟರ್ ಕದ್ದ ವಿಚಿತ್ರ ಪ್ರಸಂಗ ಕಾಪು ಕೊಪ್ಪಲಂಗಡಿಯಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಗಿಗೆ ಬಂದಿದೆ.


ಕಾರ್ಕಳ ಮುಡಾರು ಗ್ರಾಮದ ಚೇತನ್‌ ಸ್ಕೂಟರ್‌ನಲ್ಲಿ ಸುರತ್ಕಲ್‌ನತ್ತ ತೆರಳುತ್ತಿದ್ದರು. ಈ ವೇಳೆ ಭಾರೀ ನಿದ್ರೆ ಬಂದಿದ್ದರಿಂದ  ಚೇತನ್ ಸ್ಕೂಟರ್ ನ್ನು ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಸ್ಕೂಟರಿನಲ್ಲಿ ತಲೆ ಇಟ್ಟು ಮಲಗಿದ್ದರು.

ಮುಂಜಾನೆ 2.30ರ ವೇಳೆಗೆ ಎಚ್ಚರವಾದಾಗ ಚೇತನ್ ಹೆಲ್ಮೆಟ್ ಸಹಿತ ರಸ್ತೆ ಬದಿ ಮಲಗಿದ್ದು ಅವರ ಸ್ಕೂಟರ್, ಮೊಬೈಲ್, ಪರ್ಸ್ ಇಲ್ಲದೇ ಇದ್ದು ಯಾರೋ ಕಳ್ಳರು ಅಪಹರಿಸಿರುವುದು ಗೊತ್ತಾಗಿದೆ. ಕಳವಾಗಿರುವ ಪರ್ಸ್‌ನಲ್ಲಿ ಅಗತ್ಯ ದಾಖಲೆಗಳು ಇದ್ದವು ಎಂದು ಪ್ರಕರಣ ದಾಖಲಿಸಿದ್ದಾರೆ. ಇನ್ನು ಘಟನೆಯನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.

- Advertisement -

Latest News

error: Content is protected !!