Saturday, May 4, 2024
Homeಕರಾವಳಿಮಂಗಳೂರು: ಇಲ್ಲಿ ಪ್ರತಿ ರಾತ್ರಿ ಕೇಳಿ ಬರುತ್ತಿದೆ ರಕ್ತೇಶ್ವರಿ ದೈವದ ಗೆಜ್ಜೆ ಸದ್ದು; ವೀಡಿಯೊದಲ್ಲಿ ಸೆರೆಯಾಗಿದೆ...

ಮಂಗಳೂರು: ಇಲ್ಲಿ ಪ್ರತಿ ರಾತ್ರಿ ಕೇಳಿ ಬರುತ್ತಿದೆ ರಕ್ತೇಶ್ವರಿ ದೈವದ ಗೆಜ್ಜೆ ಸದ್ದು; ವೀಡಿಯೊದಲ್ಲಿ ಸೆರೆಯಾಗಿದೆ ದೈವದ ಇರುವಿಕೆಯ ಸುಳಿವು

spot_img
- Advertisement -
- Advertisement -

ಮಂಗಳೂರು; ತುಳುನಾಡಿನ ಅತ್ಯಂತ ಕಾರ್ಣಿಕದ ದೈವಗಳಲ್ಲಿ ಒಂದು ರಕ್ತೇಶ್ವರಿ ದೈವ. ದೈವಗಳು ನಂಬಿದವರನ್ನು ಯಾವತ್ತೂ ಕೈ ಬಿಡಲ್ಲ ಅನ್ನೋದು ಕರಾವಳಿಗರ ನಂಬಿಕೆ. ಇದೀಗ ರಕ್ತೇಶ್ವರಿ ದೈವ ತನ್ನ ಅಸ್ತಿತ್ವವನ್ನು ತೋರುವ ವೀಡಿಯೋ ಒಂದು ವೈರಲ್ ಆಗಿದೆ.

ಸಾಮಾಜಿಕ ಹೋರಾಟಗಾರರಾಗಿರುವ ದೀಪು ಶೆಟ್ಟಿಗಾರ್ ಎಂಬವರು ಫೇಸ್ ಬುಕ್ ನಲ್ಲಿ ತಮಗಾದ ಅನುಭವದ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಏಯ್ಯಾಡಿ ಯ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಬದಿ ಯಲ್ಲಿ ಇರುವ ನಾಗಮಂಟಪ ರಸ್ತೆಯ ರಕ್ತೇಶ್ವರಿ ಕ್ಷೇತ್ರದಲ್ಲಿ ಕೇಳಿ ಬಂದ ದೈವದ ಗೆಜ್ಜೆ ಶಬ್ಧದ ವೀಡಿಯೋವನ್ನು ಸೆರೆ ಹಿಡಿದು ಶೇರ್ ಮಾಡಿದ್ದಾರೆ. ಊರಿನ ಜನರಿಗೆ ತನ್ನ ಇರುವಿಕೆಯನ್ನು ಪ್ರತಿ ರಾತ್ರಿ ತೋರಿಸುತ್ತಿರುವ ರಕ್ತೇಶ್ವರಿ ತಾಯಿ ಎಂದು ವೀಡಿಯೋಗೆ ಟ್ಯಾಗ್ ಲೈನ್ ಬರೆದಿದ್ದಾರೆ. ಅಲ್ಲದೇ ಅಲ್ಲಿರುವ ಪ್ರತಿ ಮನೆಗಳಿಗೂ ರಕ್ತೇಶ್ವರಿ ತನ್ನ ಇರುವಿಕೆಯನ್ನು ತೋರಿಸುತ್ತಿದ್ದಾಳೆ ಎಂದು ಅವರು ಬರೆದುಕೊಂಡಿದ್ದಾರೆ. ವೀಡಿಯೋಗೆ ಒಂದಷ್ಟು ಮಂದಿ ಪರ ವಿರೋಧದ ಚರ್ಚೆ ಮಾಡಿದರೂ, ಹಲವರು ರಕ್ತೇಶ್ವರಿ ದೇವಿ ಇದೇ ರೀತಿ ತನ್ನ ಇರುವಿಕೆಯನ್ನು ತೋರಿಸೋದು ನಮಗೂ ಈ ರೀತಿಯ ಅನುಭವಗಳು ಆಗಿವೆ ಎಂದು ಕಮೆಂಟ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!